alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕಾರವಾಯ್ತು ಈ ಹುಡುಗಿಯ ಉನ್ನತ ಶಿಕ್ಷಣದ ಕನಸು

ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ 17 ವರ್ಷದ ಹುಡುಗಿಯ ಕನಸು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯ ಪ್ರವೇಶದಿಂದಾಗಿ ಸಾಕಾರಗೊಂಡಿದೆ. ಹಿಂದಿ ಮಾಧ್ಯಮದಲ್ಲಿ ಓದಿ ಅತ್ಯುತ್ತಮ ಸಾಧನೆ ಮಾಡಿರುವ ಈ ಹುಡುಗಿಯ ಕನಸು ಈಗ ನನಸಾಗಲಿದೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ ಜಲಾಲ್ಪುರ್ ಗ್ರಾಮದ ಭಾನುಪ್ರಿಯಾ ಹರಿತ್ವಾಲ್ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, 2015 ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ 2 ನೇ ರ್ಯಾಂಕ್ ಗಳಿಸಿದ ಕಾರಣಕ್ಕೆ ಮೊದಲ ಮೂರು ರ್ಯಾಕ್ ಗಳಿಸಿದ ವಿದ್ಯಾರ್ಥಿಗಳಿಗೆ ರಾಜಸ್ಥಾನ ಸರ್ಕಾರ ಕೊಡಮಾಡುವ 1 ಕೋಟಿ ರೂ. ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿದ್ದಳು.

ಸ್ಕಾಲರ್ ಶಿಪ್ ಹಣವನ್ನು ಶಿಕ್ಷಣಕ್ಕೆ ಬಳಸಿಕೊಳ್ಳಬೇಕೆಂಬ ಹಿನ್ನಲೆಯಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುವ ಬಯಕೆ ಹೊಂದಿದ್ದ ಭಾನುಪ್ರಿಯಾ, 12 ನೇ ತರಗತಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಳು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಆಂತರಿಕ ಪರೀಕ್ಷೆಯಲ್ಲೂ ಪಾಸ್ ಆಗಿದ್ದ ಭಾನುಪ್ರಿಯಾ ವೀಸಾ ಪಡೆಯಲು ಅಮೆರಿಕಾ ರಾಯಭಾರ ಕಛೇರಿಗೆ ಅರ್ಜಿ ಸಲ್ಲಿಸಿದ್ದು, ಆದರೆ ಎರಡು ಬಾರಿ ತಿರಸ್ಕೃತಗೊಂಡಿತ್ತು.

ಈ ಕಾರಣಕ್ಕೆ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಆಕೆಯ ತಂದೆ ಸೋಹನ್ ಲಾಲ್, ಸಿಕಾರ್ ಸಂಸದ ಸ್ವಾಮಿ ಸುಮೇದಾನಂದರನ್ನು ಭೇಟಿ ಮಾಡಿ ಸಹಾಯ ಮಾಡಲು ಮನವಿ ಮಾಡಿದ್ದರು. ಭಾನುಪ್ರಿಯಾಳೊಂದಿಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ ಸ್ವಾಮಿ ಸುಮೇದಾನಂದ ಸಮಸ್ಯೆಯನ್ನು ವಿವರಿಸಿದ್ದು, ಇದೀಗ ಸುಷ್ಮಾ ಸ್ವರಾಜ್ ರ ಮಧ್ಯಸ್ಥಿಕೆಯಿಂದಾಗಿ ಭಾನುಪ್ರಿಯಾಗೆ ವೀಸಾ ಸಿಕ್ಕಿದೆ. ಸದ್ಯದಲ್ಲೇ ಕ್ಯಾಲಿಫೋರ್ನಿಯಾಗೆ ತೆರಳುವ ಭಾನುಪ್ರಿಯಾ ತನ್ನ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...