alex Certify
ಕನ್ನಡ ದುನಿಯಾ       Mobile App
       
Kannada Duniya

ಎಕ್ಸ್ ಪ್ರೆಸ್ ರೈಲಿನಲ್ಲಿ ಅಮಾನವೀಯ ಕೃತ್ಯ

rail

ಬ್ಯಾಗ್ ಕದ್ದಿದ್ದಾಳೆ ಅನ್ನೋ ಆರೋಪದ ಮೇಲೆ ಹೌರಾ–ಜೋಧ್ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು 17 ವರ್ಷದ ಯುವತಿಯೊಬ್ಬಳ ಬಟ್ಟೆ ಬಿಚ್ಚಿ, ಕೂದಲು ಕತ್ತರಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಬಾಲಕಿಗೆ ಬ್ರೈನ್ ಟ್ಯೂಮರ್ ಇತ್ತು, ಕಳೆದ ಒಂದು ವರ್ಷದಿಂದ ಆಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾಳೆ. ಆಗಾಗ ಮಾನಸಿಕ ಅಸ್ವಸ್ಥಳಂತೆ ವರ್ತಿಸ್ತಾ ಇದ್ಲು.

ಜಾತ್ರೆಗೆ ಹೋಗಲು ಹೆತ್ತವರು 100 ರೂಪಾಯಿ ಕೊಡಲಿಲ್ಲ ಅನ್ನೋ ಕೋಪದಲ್ಲಿ ಆಗ್ರಾದತ್ತ ತೆರಳ್ತಾ ಇದ್ದ ರೈಲು ಏರಿದ್ಲು. ಎಸಿ ಬೋಗಿಯಲ್ಲಿ ಪ್ರಯಾಣಿಕರ ಬ್ಯಾಗ್ ಒಂದನ್ನ ಕದ್ದಿದ್ದಾಳಂತೆ. ಬಾಲಕಿಯನ್ನು ಹಿಡಿದು ದೂರು ಕೊಡೋದನ್ನು ಬಿಟ್ಟು, ಪ್ರಯಾಣಿಕರು ಕಾನೂನು ಕೈಗೆ ತೆಗೆದುಕೊಂಡಿದ್ದಾರೆ.

ಹುಡುಗಿಯ ಬಟ್ಟೆಯನ್ನೆಲ್ಲ ಹರಿದು, ತಲೆ ಬೋಳಿಸಿ ಹಿಂಸಿಸಿದ್ದಾರೆ. ಬಾಲಕಿಯ ರಕ್ಷಣೆಗೆ ಬಂದ ಟಿಟಿ ಜೊತೆಗೂ ಪ್ರಯಾಣಿಕರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದಮೇಲೆ ಬಾಲಕಿ ವಿರುದ್ಧ ಕೇಸ್ ಹಾಕಿದ್ದಾರೆ. ಅಮಾನುಷವಾಗಿ ವರ್ತಿಸಿದ 6 ಪ್ರಯಾಣಿಕರ ವಿರುದ್ಧ ರೈಲಿನ ಟಿಟಿ ಕೂಡ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಗೆ ಬ್ರೈನ್ ಟ್ಯೂಮರ್ ಇದ್ದು, ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ದಾಖಲೆಗಳನ್ನು ನೀಡಿದರೂ ಕೋರ್ಟ್ ಆಕೆಯನ್ನು ಮನ್ನಿಸಿಲ್ಲ ಅಂತಾ ಪೋಷಕರು ಕಣ್ಣೀರಿಟ್ಟಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...
ಎಕ್ಸ್ ಪ್ರೆಸ್ ರೈಲಿನಲ್ಲಿ ಅಮಾನವೀಯ ಕೃತ್ಯ | Kannada Dunia | Kannada News | Karnataka News | India News