alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗ ಹೊತ್ತೊಯ್ದಿದ್ದ ಮಗುವಿನ ದುರಂತ ಅಂತ್ಯ

ಓಡಿಶಾದ ತಲಬಸ್ತಾ ಗ್ರಾಮದಲ್ಲಿ ಕೋತಿ ಹೊತ್ತೊಯ್ದಿದ್ದ 16 ದಿನಗಳ ಹಸುಗೂಸು ಶವವಾಗಿ ಸಿಕ್ಕಿದೆ. ಬಾವಿಯೊಂದರಲ್ಲಿ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ತಂದೆ ರಾಮಕೃಷ್ಣ ನಾಯಕ್ ಎಂಬಾತನ ಮನೆಯ ಸಮೀಪದಲ್ಲೇ ಈ ಬಾವಿ ಇದೆ.

ಮಗುವನ್ನು ಹೊತ್ತೊಯ್ದ ಮಂಗ ಬಾವಿಯಲ್ಲಿ ಬಿಸಾಡಿ ಅಲ್ಲಿಂದ ಓಡಿಹೋಗಿದೆ. ಆದ್ರೆ ಮಗುವನ್ನು ಕೋತಿ ಎಲ್ಲಿಗೆ ಕೊಂಡೊಯ್ದಿದೆ ಅನ್ನೋದು ಪತ್ತೆಯಾಗಿರಲಿಲ್ಲ, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಗುವಿನ ಶೋಧಕ್ಕಾಗಿ ಸತತ ಕಾರ್ಯಾಚರಣೆ ನಡೆಸಿದ್ರು.

ಹೆತ್ತವರ ಬಳಿಯೇ ಮಗು ಮಲಗಿ ನಿದ್ರಿಸುತ್ತಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಮಗುವಿನ ತಾಯಿ ಮುಖ ತೊಳೆಯಲು ಎದ್ದು ಹೋಗಿದ್ದಳು. ತಂದೆ ಮಗುವಿನ ಪಕ್ಕದಲ್ಲಿಯೇ ಮಲಗಿದ್ದ.

ಅದೇ ಸಮಯಕ್ಕೆ ಮನೆಯೊಳಗೆ ನುಗ್ಗಿದ ಕೋತಿ, ಮಗುವನ್ನು ಹೊತ್ತೊಯ್ದಿದೆ. ಮಗುವನ್ನು ಕೋತಿ ಕೊಂಡೊಯ್ಯುತ್ತಿರುವುದು ತಾಯಿಯ ಕಣ್ಣಿಗೆ ಬಿದ್ದಿತ್ತು. ರಾಮಕೃಷ್ಣ ದಂಪತಿಗೆ ಇದು ಮೊದಲ ಮಗು, ಹುಟ್ಟಿದ ತಕ್ಷಣ ಅದು ಅತ್ತಿರಲಿಲ್ಲ.

ಹಾಗಾಗಿ 12-13 ದಿನಗಳ ಕಾಲ ಆಸ್ಪತ್ರೆಯಲ್ಲೇ ಇಡಲಾಗಿತ್ತು. ಮೂರು ದಿನಗಳ ಹಿಂದಷ್ಟೆ ತಾಯಿ, ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಘಟನೆಯಿಂದ ಆಘಾತಗೊಂಡ ಪೋಷಕರು, ಮಗು ಸುರಕ್ಷಿತವಾಗಿ ಮರಳಿ ಸಿಗಲೆಂದು ಪೂಜೆ, ಪುನಸ್ಕಾರ ಮಾಡಿದ್ರು, ಆದ್ರೂ ಪ್ರಯೋಜನವಾಗಿಲ್ಲ.

ಕೆಲ ದಿನಗಳ ಹಿಂದಷ್ಟೆ ಕೋತಿಗಳು ಜನರ ಮೇಲೆ ದಾಳಿ ಮಾಡಿದ್ದವು. ಈ ಬಗ್ಗೆ ದೂರು ನೀಡಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...