alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಅತ್ಯಾಚಾರ ಆರೋಪಿ ಜೊತೆ ಸಂಪರ್ಕದಲ್ಲಿದ್ದ ಸಚಿವೆಯ ಪತಿ

ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜುವರ್ಮಾ ಅವರು ಸಂಪುಟದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯನ್ನು ಎದುರಿಸ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿರುವ ಮಂಜು ವರ್ಮಾ ಅವರ ಪತಿ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವವನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಅಂತ ಹೇಳಲಾಗ್ತಿದೆ. ಆರೋಪಿ ಮತ್ತು ಮಂಜು ವರ್ಮಾ ಅವರ ಪತಿ ಚಂದೇಶ್ವರ್ ವರ್ಮಾ ನಡುವೆ 17 ಕರೆಗಳು ವಿನಿಮಯವಾಗಿದೆಯಂತೆ.

ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಮಂತ್ರಿ ಮಂಜು ವರ್ಮಾ ಅವರ ಪತಿ ಚಂದೇಶ್ವರ್ ವರ್ಮಾ ಅವರನ್ನ ಹೆಚ್ಚಿನ ತನಿಖೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಈಗಾಗ್ಲೇ ಪ್ರಕರಣದಲ್ಲಿ ಬಂಧಿತವಾಗಿರುವ ಓರ್ವರು, ಆರೋಪಿ ನಡೆಸುತ್ತಿದ್ದಂತಾ ಶೆಲ್ಟರ್ ಹೋಮ್ ಗೆ ಚಂದೇಶ್ವರ್ ವರ್ಮಾ ಆಗಾಗ್ಗೆ ಬರುತ್ತಿದ್ದರು ಅಂತ ಬಾಯ್ಬಿಟ್ಟಿದ್ದಾರೆ.

ಪ್ರಕರಣದ ಮುಖ್ಯ ಆರೋಪಿಯಾಗಿರುವ ಬ್ರಿಜೇಶ್ ಠಾಕೂರ್ ನಡೆಸುತ್ತಿದ್ದ ಎನ್ಜಿಓದಲ್ಲಿ 30 ಯುವತಿಯರ ಮೇಲೆ ಅತ್ಯಾಚಾರವಾಗಿರುವ ಆರೋಪವಿದೆ. ಆರೋಪಿ ಮತ್ತು ಸಚಿವರ ಪತಿಯ ನಡುವಿನ ಫೋನ್ ಸಂಭಾಷಣೆಗಳ ಕಾಲ್ ಡೀಟೈಲ್ಸ್ ನ್ನ ಪೊಲೀಸರು ಕಲೆಹಾಕಿದ್ದಾರೆ. ಆರೋಪಿ ಮತ್ತು ಚಂದೇಶ್ವರ್ ವರ್ಮಾ ಅವರ ನಡುವೆ ನಡೆದಿರುವ ಸಂಭಾಷಣೆ ಏನು ಅನ್ನೋದ್ರ ಬಗ್ಗೆ ಮಾಹಿತಿ ಕಲೆಹಾಕಬೇಕಿದೆ. ಪೊಲೀಸರ ಜೊತೆಗೆ ಸಿಬಿಐ ಕೂಡ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಸಚಿವರ ಪತಿ ಬಂಧನದ ಭೀತಿಯನ್ನು ಎದುರಿಸ್ತಿದ್ದಾರೆ.

ಪ್ರಕರಣ, ವಿಚಾರಣೆ ಹಂತದಲ್ಲಿರೋದ್ರಿಂದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಾಜ ಕಲ್ಯಾಣ ಇಲಾಖೆ ಸಚಿವರ ಮೇಲೆ ಶಿಸ್ತು ಕ್ರಮ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರಂತೆ. ಪತಿಯ ಮೇಲೆ ಬಂದಿರುವ ಆರೋಪ ಸರ್ಕಾರಕ್ಕೆ ಕೆಟ್ಟ ಹೆಸರು ತರಬಾರದು ಅನ್ನೋ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರ ರಾಜೀನಾಮೆಯನ್ನು ಕೇಳಿದ್ದಾರೆ ಅಂತ ಹೇಳಲಾಗ್ತಿದೆ. ಒಂದು ವೇಳೆ ಸಚಿವರ ಪತಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದೇ ಆದ್ರೆ ಮಂಜು ವರ್ಮಾ ಅವರನ್ನ ಸಂಪುಟದಿಂದ ವಜಾ ಮಾಡೋದಾಗಿ ನಿತೀಶ್ ಕುಮಾರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...