alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗ ಸಂಬಂಧಕ್ಕೆ ಪಾಲಕರ ಅಡ್ಡಿ: ಅಪ್ರಾಪ್ತೆ ಮಾಡಿದ್ಲು ಇಂಥ ಕೆಲಸ

ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ದಂಗಾಗಿಸುವ ಘಟನೆ ನಡೆದಿದೆ. 16 ವರ್ಷದ ಹುಡುಗಿಯೊಬ್ಬಳು 4 ವರ್ಷದ ಹುಡುಗಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ತಪ್ಪೊಪ್ಪಿಕೊಂಡಿರುವ ಹುಡುಗಿ ಕೊಲೆಗೆ ಹೇಳಿದ ಕಾರಣ ಕೇಳಿ ಪೊಲೀಸರು ಕಂಗಾಲಾಗಿದ್ದಾರೆ.

ನವೆಂಬರ್ 11ರಂದು ನಾಲ್ಕು ವರ್ಷದ ಬಾಲಕಿ ಇಸ್ಮತ್ ಕಾಣಿಯಾಗಿದ್ದಳು. ಕುಟುಂಬಸ್ಥರು ನವೆಂಬರ್ 13ರಂದು ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ 16ರಂದು ಇಸ್ಮತ್ ಶವ ಪಕ್ಕದ ಪಾಳು ಮನೆಯಲ್ಲಿ ಸಿಕ್ಕಿದೆ. ಮನೆ ಮಾಲೀಕ ಹಾಗೂ ಆತನ ಮಗನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಇದೊಂದು ಸಮಲಿಂಗ ಪ್ರಕರಣ ಎಂಬುದು ಬಯಲಿಗೆ ಬಂದಿದೆ.

ಇಸ್ಮತ್ ಸಹೋದರಿಯನ್ನು ಪಕ್ಕದ ಮನೆಯ 16 ವರ್ಷದ ಹುಡುಗಿ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಸಮಲಿಂಗದ ಪ್ರೀತಿ ಗೊತ್ತಾದ ಇಸ್ಮತ್ ಕುಟುಂಬಸ್ಥರು ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಜೊತೆಗೆ 16 ವರ್ಷದ ಹುಡುಗಿಗೆ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.

ಪ್ರೀತಿ ಕಳೆದುಕೊಂಡ ಹುಡುಗಿ ಕಂಗಾಲಾಗಿದ್ದಾಳೆ. ತನ್ನ ಪ್ರೀತಿಯನ್ನು ಹೇಗಾದ್ರೂ ಊರಿಗೆ ಕರೆಸಿಕೊಳ್ಳಬೇಕೆಂದು ಪ್ಲಾನ್ ಮಾಡಿದ್ದಾಳೆ. ಈ ವೇಳೆ ಹುಡುಗಿ ತಂಗಿ ಇಸ್ಮತ್ ಕಣ್ಣಿಗೆ ಬಿದ್ದಿದ್ದಾಳೆ. ಮಿಠಾಯಿ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದೊಯ್ದು ಅಕ್ಕನ ಬಗ್ಗೆ ಮಾಹಿತಿ ಪಡೆದಿದ್ದಾಳೆ. ಪ್ರೇಮಿ ಸಂಬಂಧಿಕರ ಮನೆಗೆ ಹೋಗಿದ್ದು, ವಾಪಸ್ ಬರುವುದಿಲ್ಲ ಎಂಬ ಸಂಗತಿ ತಿಳಿದ ಹುಡುಗಿ ಕೋಪದಿಂದ ಬಾಲಕಿ ಕತ್ತು ಹಿಸುಕಿದ್ದಾಳೆ. 4 ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಪಾಳು ಬಿದ್ದ ಮನೆಯಲ್ಲಿ ಬಾಲಕಿ ಶವ ಹಾಕಿ ಬೀಗ ಹಾಕಿ ಹೋಗಿದ್ದಾಳೆ ಹುಡುಗಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...