alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾದ ಬಾಲಕ

ಕೆಲಸ ಮಾಡುತ್ತಿದ್ದ ಬೇಕರಿಯಲ್ಲಿ ಕಳ್ಳತ‌ನ ಮಾಡಿದ್ದ ಬಾಲಕ ಮರ್ಯಾದೆಗೆ ಅಂಜಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಮಹಾರಾಷ್ಟ್ರದ ಸಾಂಗ್ಲಿ‌ ಜಿಲ್ಲೆಯಲ್ಲಿ ನಡೆದಿದ್ದು,‌ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 16 ವರ್ಷದ ಬಾಲಕ ಗಣೇಶ್ ಆಲಿಯಾಸ್ ಶುಭಂ‌ ವಾಂಖೆಡೆ ಎನ್ನುವ ಬಾಲಕ ಬೇಕರಿಯಲ್ಲಿ 3500 ರೂ. ಹಣ ಹಾಗೂ 64 ಜಿಬಿ ಮೆಮೊರಿ ಕಾರ್ಡ್ ನ್ನು ಕದ್ದಿದ್ದಾನೆ. ಬಳಿಕ‌ ತಾನು‌ ಮಾಡಿದ ಕಳ್ಳತನದ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ ಎನ್ನುವುದು ಅರಿವಾಗಿ ಮರ್ಯಾದೆಗೆ ಅಂಜಿ ಮನೆಯ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಸಾಯುವ ಮೊದಲು‌ ವಾಂಖೆಡೆ ಬರೆದಿರುವ ಡೆತ್ ನೋಟ್ ನ್ನು ಇದೀಗ ಪೊಲೀಸರು ಬಹಿರಂಗಗೊಳಿಸಿದ್ದು, ಕಳ್ಳತನ ಮಾಡಿರುವ ವಿಷಯ ಬಹಿರಂಗವಾಗುವುದರಿಂದ ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಎಂದು ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಬರೆದಿದ್ದಾನೆ ಎಂದು ತಿಳಿಸಿದ್ದಾರೆ.

ಕಳ್ಳತನ ಸಂಬಂಧ ಬೇಕರಿ‌ ಮಾಲೀಕ‌ ವಾಂಖೆಡೆ‌ ಹಾಗೂ ಈತನಿಗೆ ಸಹಾಯ ಮಾಡಿದ್ದ ಸ್ನೇಹಿತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಸ್ನೇಹಿತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...