alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದ ಗಲಾಟೆಯಿಂದ ಹೊರ ಬರಲು ಆರ್ಟ್ ಆಫ್ ಲಿವಿಂಗ್ ಮೊರೆ ಹೋದ ಸಿಬಿಐ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಮಧ್ಯೆ ನಡೆಯುತ್ತಿರುವ ವಿವಾದ ಸಿಬಿಐನ ಇತರ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದೆ. ಒತ್ತಡದಲ್ಲಿರುವ 150 ಸಿಬಿಐ ಅಧಿಕಾರಿಗಳನ್ನು ಆರ್ಟ್ ಆಫ್ ಲಿವಿಂಗ್ ಗೆ ಕಳುಹಿಸಲು ನಿರ್ಧರಿಸಲಾಗಿದೆ.

ಸಿಬಿಐನ 150 ಅಧಿಕಾರಿಗಳಿಗೆ ಶನಿವಾರದಿಂದ ಮೂರು ದಿನಗಳ ಕಾಲ ವಿಶೇಷ ಕಾರ್ಯಾಗಾರ ನಡೆಯಲಿದೆ. ಅಧಿಕಾರಿಗಳಿಗೆ ಧನಾತ್ಮಕ ಶಕ್ತಿ ವೃದ್ಧಿ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಸಿಬಿಐನ ಇನ್ಸ್ಪೆಕ್ಟರ್ ರಿಂದ ಹಿಡಿದು ಇಂಚಾರ್ಜ್ ಡೈರೆಕ್ಟರ್ ವರೆಗೆ ಎಲ್ಲರೂ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಾಗಾರ ದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ನಡೆಯಲಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ವಿಶೇಷ ನಿರ್ದೇಶಕ ರಾಕೇಶ್ 2 ಕೋಟಿ ರೂಪಾಯಿ ಲಂಚದ ಆರೋಪ ಹೊರಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಎರಡು ವಾರಗಳೊಳಗೆ ವರದಿ ನೀಡುವಂತೆ ಸಿವಿಸಿಗೆ ಸೂಚನೆ ನೀಡಿದೆ. ಸದ್ಯ ಇಬ್ಬರು ಅಧಿಕಾರಿಗಳನ್ನು ರಜೆ ಮೇಲೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...