alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತನ ಸಾವಿಗೆ ಕಾರಣವಾಯ್ತು ಪೊಲೀಸ್ ವಿಚಾರಣೆ

ವಾಹನ ಕಳ್ಳತನ ಪ್ರಕರಣದಲ್ಲಿ ಅಕ್ರಮವಾಗಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದ ಹಿನ್ನಲೆಯಲ್ಲಿ ಬೆದರಿದ 15 ವರ್ಷದ ಬಾಲಕ ತನ್ನ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುವರಕ್ಕಾಡು ಏರಿಯಾದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಡೇವಿಡ್ ಎಂಬ ಬಾಲಕನನ್ನು ಮೂರು ದಿನಗಳ ಹಿಂದೆ ಅಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು, ತಪ್ಪೊಪ್ಪಿಕೊಳ್ಳುವಂತೆ ಚಿತ್ರಹಿಂಸೆ ನೀಡಿದ್ದರೆನ್ನಲಾಗಿದೆ.

ಸೋಮವಾರ ಸಂಜೆ ಠಾಣೆಯಿಂದ ಹೊರ ಬಂದಿದ್ದ ಡೇವಿಡ್ ಮಾನಸಿಕವಾಗಿ ನೊಂದಿದ್ದು, ಮಂಗಳವಾರದಂದು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ತಮ್ಮ ಮೇಲೆ ಆರೋಪ ಬರುತ್ತಿದ್ದಂತೆಯೇ ಸಮಜಾಯಿಷಿ ನೀಡಿರುವ ಪೊಲೀಸರು, ವಾಹನ ಕಳವು ಸಂದರ್ಭದಲ್ಲಿ ಸನಿಹದಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯವನ್ನಾಧರಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಅವರುಗಳು ವಾಹನ ಕಳವು ಪ್ರಕರಣದಲ್ಲಿ ಡೇವಿಡ್ ಸಹ ತಮ್ಮೊಂದಿಗಿದ್ದುದ್ದಾಗಿ ಹೇಳಿದ ಹಿನ್ನಲೆಯಲ್ಲಿ ವಿಚಾರಣೆಗಾಗಿ ಕರೆಸಲಾಗಿತ್ತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...