alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಬೋಗಿಯಲ್ಲಿದ್ದ 1400 ಪುರುಷ ಪ್ರಯಾಣಿಕರ ಅರೆಸ್ಟ್

ಭಾರತೀಯ ರೈಲ್ವೆ ಪೊಲೀಸರು ಪ್ರಸಕ್ತ ವರ್ಷದಲ್ಲಿ ಸುಮಾರು 1400 ಪುರುಷ ಪ್ರಯಾಣಿಕರನ್ನು ಬಂಧಿಸುವ ಮೂಲಕ ರೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದಾರೆ. ಮಹಿಳಾ ಕಂಪಾರ್ಟ್ಮೆಂಟ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದ 1400 ಪುರುಷರನ್ನು ಬಂಧಿಸಲಾಗಿದೆಯಂತೆ. ರಾಷ್ಟ್ರೀಯ ರೈಲ್ವೆ ಇಲಾಖೆ ಈ ಬಗ್ಗೆ ಅಂಕಿ ಅಂಶಗಳ ಸಮೇತ ವರದಿಯನ್ನ ನೀಡಿದೆ.

2018 ರಲ್ಲಿ 220 ರೈಲುಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ 61,211 ಮಂದಿಯನ್ನ ಬಂಧಿಸಿ ಹಲವು ಪ್ರಕರಣಗಳನ್ನ ದಾಖಲಿಸಲಾಗಿದೆ. ಬಂಧಿತರಿಂದ ಸುಮಾರು 1 ಕೋಟಿ 50 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಜುಲೈ 2018 ರವರೆಗೆ ದಾಖಲಾದ ದೂರುಗಳಲ್ಲಿ ನಾನಾ ಕಾಯ್ದೆಗಳ ಅಡಿಯಲ್ಲಿ ಸುಮಾರು 250 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಕೋರ್ಟ್ ತೀರ್ಪು ಸಹ ಪ್ರಕಟವಾಗಿದೆ.

2018 ರ ವರ್ಷವನ್ನ ಭಾರತೀಯ ರೈಲ್ವೆ ಸಚಿವರು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ವರ್ಷ ಎಂದು ಘೋಷಿಸಿದ್ದರು. 1400 ಮಂದಿ ಪುರುಷರು ಮಹಿಳೆಯರ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣ ಮಾಡ್ತಿರೋದು ಗಮನಕ್ಕೆ ಬಂದಿದೆ. 25,52,101 ರೂಪಾಯಿ ಮೌಲ್ಯದ ರೈಲ್ವೇ ಆಸ್ತಿಯನ್ನು ಇಲ್ಲಿಯವರೆಗೂ ವಶಪಡಿಸಿಕೊಳ್ಳಲಾಗಿದೆ. 2137 ಮಕ್ಕಳ ಪೈಕಿ 221 ಹೆಣ್ಣು ಮಕ್ಕಳನ್ನ ರೈಲ್ವೆ ಇಲಾಖೆ ರಕ್ಷಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...