alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಕಟ್ಟಡದಿಂದ ಹಾರಿದ ಯುವತಿಯ ವಿಡಿಯೋ

14 ವರ್ಷದ ಹುಡುಗಿಯೊಬ್ಬಳು ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಖಂಡೀವಾಲಿಯಲ್ಲಿ ನಡೆದಿದೆ. ಹರ್ಷಿಕಾ ಧೀರೇಂದ್ರ ಮಾಯವಾಶಿ ಆತ್ಮಹತ್ಯೆ ಮಾಡಿಕೊಂಡ ಹುಡುಗಿ. ಹರ್ಷಿಕಾ ಆತ್ಮಹತ್ಯೆ ಮಾಡಿಕೊಂಡ ಕಟ್ಟಡದ ಐದನೇ ಮಹಡಿಯಲ್ಲಿ ವಾಸವಿದ್ದಳು ಅನ್ನೋ ಮಾಹಿತಿ ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಹರ್ಷಿಕಾ ಎಂಟನೇ ಮಹಡಿಯ ಪ್ಯಾರಾಪಿಟ್ ಮೇಲೆ ಕುಳಿತಿದ್ದ ಕಾರಣ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದು ಅಂತ ಹೇಳ್ತಿದ್ದಾರೆ. ಆಕೆ ಕೆಳಗೆ ಬಿದ್ದ ಕೂಡಲೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲೇ ಆಕೆ ಸಾವನ್ನಪ್ಪಿಬಿಟ್ಟಿದ್ದಳು. ಅಕೆಯ ಸಾವಿಗೆ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ.

ಪೊಲೀಸರು ಆಕೆಯ ಮೊಬೈಲ್ ಕಾಲ್ ಡೀಟೈಲ್ಸ್ ಪರಿಶೀಲನೆ ನಡೆಸ್ತಿದ್ದಾರೆ. ಜೊತೆಗೆ ಹರ್ಷಿಕಾ ಬಂಧುಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸ್ತಿದ್ದಾರೆ. ಅಲ್ಲದೇ ಹರ್ಷಿಕಾ ಸೋಷಿಯಲ್ ಮೀಡಿಯಾದ ಸ್ಟೇಟಸ್ ಗಳನ್ನು ಪರಿಶೀಲನೆ ನಡೆಸ್ತಿದ್ದಾರೆ. ಹರ್ಷಿಕಾ ಮಹಡಿಯಿಂದ ಹಾರಿ ಕೆಳಗೆ ಬೀಳುವ ವಿಡಿಯೋ ಪೊಲೀಸರಿಗೆ ಸಿಕ್ಕಿದ್ದು , ಆ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲೂ ಹರಿದಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...