alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನದೇ ಬಾಲ್ಯ ವಿವಾಹ ತಡೆದಿದ್ದಾಳೆ 14 ವರ್ಷದ ದಿಟ್ಟ ಬಾಲೆ

21ನೇ ಶತಮಾನದಲ್ಲೂ ಬಾಲ್ಯ ವಿವಾಹ ಅನ್ನೋ ಪಿಡುಗು ನಮ್ಮಲ್ಲಿದೆ. ಶೇ.47ರಷ್ಟು ಮದುವೆಗಳು ವಧುವಿಗೆ 18 ತುಂಬುವ ಮುನ್ನವೇ ನೆರವೇರುತ್ತಿವೆ ಅನ್ನೋದು ನಿಜಕ್ಕೂ ದುರಂತದ ಸಂಗತಿ. ಈ ಪಿಡುಗನ್ನು ತೊಡೆದು ಹಾಕುವ ಪ್ರಯತ್ನ ಕೂಡ ನಿರಂತರವಾಗಿ ನಡೆಯುತ್ತಲೇ ಇದೆ.

14  ವರ್ಷದ ಬಾಲಕಿಯೊಬ್ಬಳು ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾಳೆ. ತನ್ನದೇ ಮದುವೆಯನ್ನು ತಡೆದಿದ್ದಾಳೆ. ಅವಳದ್ದು 11 ಜನ ಸದಸ್ಯರನ್ನುಳ್ಳ ಬಡ ಕುಟುಂಬ. ಮಗಳಿಗೆ ಬಾಲ್ಯ ವಿವಾಹ ಮಾಡಲು ಹೆತ್ತವರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ‘

ಆದ್ರೆ ಚೆನ್ನಾಗಿ ಓದಿ ಮುಂದೆ ಐಪಿಎಸ್ ಅಧಿಕಾರಿಯಾಗಬೇಕು ಅನ್ನೋದು ಅವಳ ಆಸೆ. ಜನವರಿ 25ಕ್ಕೆ ಅವಳ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಆದ್ರೆ ದೃಢ ನಿರ್ಧಾರ ಮಾಡಿದ ಬಾಲಕಿ ತನ್ನ ಸಹೋದರ ಮತ್ತು ನೆರೆಹೊರೆಯವರ ಸಹಾಯದಿಂದ ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಬಲವಂತದ ಮದುವೆ ಬಗ್ಗೆ ಪೊಲೀಸರಿಗೆ ಬಾಲಕಿ ಮಾಹಿತಿ ನೀಡಿದ್ಲು. ಹಾಗಾಗಿ ಪೊಲೀಸರು ಕೂಡ ಆಕೆಗೆ ಸಹಾಯ ಮಾಡಿದ್ದಾರೆ. ಶಾಲೆಯಲ್ಲಿ ಬಾಲ್ಯ ವಿವಾಹದ ಬಗ್ಗೆ ಶಿಕ್ಷಕರು ಮಾಡಿದ್ದ ಪಾಠ ಕೇಳಿದ್ದ ಬಾಲಕಿ ತನ್ನದೇ ಮದುವೆಯನ್ನು ವಿರೋಧಿಸುವ ಧೈರ್ಯ ತೋರಿದ್ದು ಮಾತ್ರ ವಿಶೇಷವೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...