alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಅಮ್ಮ ಮೊಬೈಲ್ ಕಿತ್ಕೊಂಡಿದ್ದಕ್ಕೆ ನೇಣು ಹಾಕಿಕೊಂಡ ಬಾಲಕ

ಅಮ್ಮ ಮೊಬೈಲ್ ಫೋನ್ ಕಸಿದುಕೊಂಡರು ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ನಾಗಪುರದಲ್ಲಿ ನೆಲೆಸಿರುವ 14 ವರ್ಷದ ಬಾಲಕ ಕ್ರಿಷ್ ಸುನಿಲ್ ಲುನಾವತ್ ಆತ್ಮಹತ್ಯೆ ಮಾಡಿಕೊಂಡವ.

ಕ್ರಿಷ್ ತನ್ನ ತಾಯಿ ಹಾಗೂ ಸೋದರಿಯೊಂದಿಗೆ ನೆಲೆಸಿದ್ದು, ಅವರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರೂ ಈತ ಒಂದು ವರ್ಷದಿಂದ ಶಾಲೆಗೂ ಹೋಗದೆ ಮನೆಯಲ್ಲೇ ಇದ್ದ. ಸೋದರಿ ಹಾಗೂ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಈತ ಮೊಬೈಲ್ ಫೋನ್‍ನಲ್ಲೇ ಕಾಲ ಕಳೆಯುತ್ತಿದ್ದು, ವಿಡಿಯೊ ಗೇಮ್ಸ್ ವ್ಯಸನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಸೋಮವಾರ ಮುಂಬೈಗೆ ಹೋಗಲಿಕ್ಕಿದೆ ಎಂದು ಮೊಬೈಲ್‍ ಫೋನ್ ಕೇಳಿದ್ದರೂ ಮಗ ಕೊಡದಿದ್ದಾಗ, ಆತನಿಂದ ಅದನ್ನು ಕಸಿದುಕೊಂಡು ಮುಂಬೈಗೆ ತೆರಳಿದ್ದರು. ಇದರಿಂದ ತೀವ್ರ ಬೇಸರಕ್ಕೀಡಾದ ಆತ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಸಂಜೆ ಸೋದರಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...