alex Certify
ಕನ್ನಡ ದುನಿಯಾ       Mobile App
       

Kannada Duniya

133 ಹಳ್ಳಿಗೆ ಒಂದೇ ಬ್ಯಾಂಕ್ ಒಂದೇ ಎಟಿಎಮ್ !

one_atm_2016630_95952_29_06_2016

ಛತ್ತೀಸ್ ಘಡದ ಪಖಾಂಜೂರ್ ಹಳ್ಳಿಯಲ್ಲಿರುವ ಕೇವಲ ಒಂದೇ ಬ್ಯಾಂಕ್, ಒಂದೇ ಎಟಿಎಮ್ ನಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ 133 ಹಳ್ಳಿಯ ಜನರು ಪಖಾಂಜೂರ್ ಸ್ಟೇಟ್ ಬ್ಯಾಂಕ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಜನ ಕಿಕ್ಕಿರಿಯುತ್ತಾರೆ. ಎಟಿಎಮ್ ನಿಂದ ಹಣ ತೆಗೆಯಬೇಕಾದರೆ ಮೈಲುಗಟ್ಟಲೆ ಸಾಲಲ್ಲಿ ನಿಲ್ಲಬೇಕಾಗುತ್ತದೆ.

ದೂರದ ಹಳ್ಳಿಯಿಂದ ಬರುವ ಜನರು ಗಂಟೆಗಟ್ಟಲೇ ನಿಂತು ಹಣಕ್ಕಾಗಿ ಕಾಯಬೇಕಾಗಿದೆ. ಯಾರಿಗಾದರೂ ಅಪಘಾತ ಸಂಭವಿಸಿದಲ್ಲಿ ತಕ್ಷಣಕ್ಕೆ ಹಣ ಬೇಕೆಂದರೆ ಕ್ಯೂ ಇರುವ ಕಾರಣ ಬೇಗನೆ ಹಣ ಸಿಗುವುದಿಲ್ಲ. ಇದು ಪರಸ್ಪರ ಘರ್ಷಣೆಗೂ ಕಾರಣವಾಗುತ್ತಿದೆ.

ಈಗ ಎಂತಹ ನಗರದಲ್ಲಾದರೂ ಮಾರು ಮಾರಿಗೆ ಎಟಿಎಮ್ ಕಾಣಿಸುತ್ತವೆ ಅಂತದರಲ್ಲಿ ಇಲ್ಲಿ ಇಷ್ಟೊಂದು ಜನರಿಗೆ ಒಂದೇ ಎಟಿಎಮ್, ಬ್ಯಾಂಕ್ ಇದೆಯೆಂದರೆ ಆಶ್ಚರ್ಯವಾಗುತ್ತದೆ. ನಗರ ಪಂಚಾಯತ್, ಮಂಡಲ ಪಂಚಾಯತ್ ಅಧ್ಯಕ್ಷರುಗಳು ಎಷ್ಟೇ ಬೇಡಿಕೆ ಇಟ್ಟರೂ ಅವರ ಬೇಡಿಕೆ ಈಡೇರದಿರುವುದು ವಿಷಾದನೀಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...