alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಧ್ರ-ತೆಲಂಗಾಣದಲ್ಲಿ ಸಿಡಿಲಿಗೆ 13 ಮಂದಿ ಬಲಿ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾನುವಾರದಂದು ಸಿಡಿಲಿಗೆ 13 ಮಂದಿ ಬಲಿಯಾಗಿದ್ದು, ಈ ಪೈಕಿ ಆಂಧ್ರ ಪ್ರದೇಶದ 10 ಹಾಗೂ ತೆಲಂಗಾಣದ 3 ಮಂದಿ ಸೇರಿದ್ದಾರೆ.

ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಪ್ರತಿನಿತ್ಯ ಸುರಿಯುತ್ತಿದ್ದು, ಈವರೆಗೆ 25 ಕ್ಕೂ ಅಧಿಕ ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆಂದು ಹೇಳಲಾಗಿದೆ.

ಭಾನುವಾರದಂದು ತೆಲಂಗಾಣದ ಭೀಮರಾಮ್ ಮಂಡಲ್ ವ್ಯಾಪ್ತಿಯ ಅರೆಪಲ್ಲಿ ಗ್ರಾಮದ ಮೂವರು, ಮಳೆ ಬರುತ್ತಿದ್ದ ಕಾರಣ ಕೊಯ್ಲು ಮಾಡಿದ್ದ ಬೆಳೆಗೆ ಟಾರ್ಪಲ್ ಮುಚ್ಚಲು ಹೋದ ವೇಳೆ ಸಿಡಿಲಿಗೆ ಬಲಿಯಾಗಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಾಲ್ವರು ಯುವಕರು ಸೇರಿದಂತೆ ಒಟ್ಟು 8 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಮತ್ತೊಂದು ಭಾಗದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  ಶ್ರೀಕಾಕುಳಂ ಜಿಲ್ಲೆಯೊಂದರಲ್ಲೇ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ 20 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...