alex Certify
ಕನ್ನಡ ದುನಿಯಾ       Mobile App
       

Kannada Duniya

ದೋಣಿ ಮಗುಚಿ ಬಿದ್ದು 13 ಮಂದಿ ಸಾವು

ap-boat-nm

ಅನಂತಪುರ: ಕೆರೆಯಲ್ಲಿ ದೋಣಿ ಮಗುಚಿ ಬಿದ್ದು, 13 ಮಂದಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ನಡೆದಿದೆ.

ಗುತ್ತಿ ತಾಲ್ಲೂಕಿನ ಯರ್ರಾ ತಿಮ್ಮರಾಜು ಕೆರೆಯಲ್ಲಿ ನಾವಿಕರನ್ನು ಬಿಟ್ಟು, ವಿಹಾರಕ್ಕೆ ತೆರಳಿದ್ದ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದ ಜನ ಕೆರೆಯಲ್ಲಿ ವಿಹಾರಕ್ಕೆ ತೆರಳಿದ್ದಾರೆ. 5 ಜನ ತೆರಳಬೇಕಿದ್ದ ದೋಣಿಯಲ್ಲಿ 19 ಮಂದಿ ತೆರಳಿದ್ದು, ಭಾರ ತಾಳದೇ ದೋಣಿ ಮಗುಚಿದೆ. 6 ಮಕ್ಕಳು, 7 ಮಹಿಳೆಯರು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ.

ಯರ್ರಮ್ಮ, ಬನ್ನಿ, ಸ್ಪಂದನಾ, ಲಕ್ಷ್ಮಿ, ಲಾವಣ್ಯ ಮೊದಲಾದವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ತೆರಳಿ ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...