alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲೂ ಪುತ್ರನ ಕೈ ಹಿಡಿಯುತ್ತಿರುವ ಐಶ್ವರ್ಯಾ ಓದಿರುವುದೇನು ಗೊತ್ತಾ?

ಆರ್ ಜೆ ಡಿ ಮುಖಂಡ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ರಾಬ್ರಿದೇವಿ ಪುತ್ರ ತೇಜ್ ಪ್ರತಾಪ್ ಯಾದವ್ ಮಾಜಿ ಸಚಿವೆ ಚಂದ್ರಿಕಾ ಪ್ರಸಾದ್ ರೈ ಅವರ ಹಿರಿಯ ಪುತ್ರಿ ಐಶ್ವರ್ಯಾ ರೈ ಯನ್ನು ಮದುವೆಯಾಗುತ್ತಿದ್ದಾರೆ. ಮೇ 12 ರಂದು ಇಬ್ಬರೂ ಪಾಟ್ನಾದಲ್ಲಿ ಹಸೆಮಣೆ ಏರಲಿದ್ದಾರೆ.

12 ಕ್ಲಾಸ್ ಪಾಸೌಟ್ ಆಗಿರೋ 29 ವರ್ಷದ ತೇಜ್ ಯಾದವ್ 25 ವರ್ಷದ ಎಂಬಿಎ ಪದವೀಧರೆ ಐಶ್ವರ್ಯಾರನ್ನು ವರಿಸಲಿದ್ದು, ಐಶರ್ಯಾ ರಾಜಕೀಯದ ಕಡೆಗೆ ಯಾವುದೇ ಒಲವು ತೋರಿಲ್ಲ. ಇದೇ ಏಪ್ರಿಲ್ 18 ರಂದು ಪಾಟ್ನಾದ ಮೌರ್ಯ ಹೋಟೆಲ್ ನಲ್ಲಿ ಎಂಗೇಜ್ ಮೆಂಟ್ ನೆರವೇರಲಿದೆ.

ಈಗಾಗಲೇ ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಮಗನ ಮದುವೆಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆನ್ನಲಾಗಿದೆ. ರಾಯಲ್ ವೆಡ್ಡಿಂಗ್ ಗೆ ಸಾಕಷ್ಟು ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...