alex Certify
ಕನ್ನಡ ದುನಿಯಾ       Mobile App
       

Kannada Duniya

120 ವರ್ಷದಲ್ಲಿ ಮೊದಲ ಬಾರಿ ಆರೋಗ್ಯ ತಪಾಸಣೆ..!

swami-sivananda

ಈ ಸುದ್ದಿ ನಿಮಗೆ ಆಶ್ಚರ್ಯವೆನಿಸಬಹುದು. ಆದ್ರೆ 120 ವರ್ಷದ ವ್ಯಕ್ತಿಯೊಬ್ಬ ಮೊದಲ ಬಾರಿ ತನ್ನ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಬಾಬಾ ಸ್ವಾಮಿ ಶಿವಾನಂದ್ ಗೆ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು.

ಬಾಬಾ ಜೀವನದಲ್ಲಿ ಮೊದಲ ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಪ್ರಕಾರ ಶಿವಾನಂದ್ ಆಗಸ್ಟ್ 8,1896 ರಲ್ಲಿ ಜನಿಸಿದ್ದಾರೆ. ಅಂದ್ರೆ ಶಿವಾನಂದ್ ವಯಸ್ಸು ಈಗ 120. ಇವರನ್ನು ನೋಡಿದ್ರೆ ಇಷ್ಟು ವಯಸ್ಸಾಯ್ತು ಎನ್ನಲು ಸಾಧ್ಯವೇ ಇಲ್ಲ.

ತಪಾಸಣೆ ನಡೆಸಿದ ವೈದ್ಯರು ಕೂಡ ಆಶ್ಚರ್ಯಕ್ಕೊಳಗಾಗಿದ್ದಾರೆ. ಬಾಬಾ ಬಿಪಿ ಸ್ವಲ್ಪ ಹೆಚ್ಚಾಗಿದ್ದು ಬಿಟ್ಟರೆ ಮತ್ತೇನೂ ಆಗಿರಲಿಲ್ಲ. ಬೆಳಿಗ್ಗೆ ಹಸಿ ಮೆಣಸು ಹಾಗೂ ಬೇಯಿಸಿದ ಆಹಾರ ತಿನ್ನುತ್ತೇನೆ ಎನ್ನುವ ಬಾಬಾ, ನಿಯಮಿತವಾಗಿ ವ್ಯಾಯಾಮ ಮಾಡ್ತಾರಂತೆ. ಸದ್ಯ ಕೋಲ್ಕತ್ತಾದ ಸಾಲ್ಟ್ ಲೇಕ್ ಸಿಟಿಯಲ್ಲಿ ಅನುಯಾಯಿಗಳೊಂದಿಗೆ ವಾಸವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...