alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾಗಿದ್ದ ಮಗನ ತಂದೆ ಮಾತು ಕೇಳಿದ ಪೊಲೀಸರಿಗೆ ಶಾಕ್

ಕಾಣೆಯಾಗಿದ್ದ ಮಕ್ಕಳು ಸಿಕ್ಕರೆ ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ, ಖುಷಿಪಡ್ತಾರೆ. ಆದ್ರೆ 12 ವರ್ಷದ ಬಾಲಕನೊಬ್ಬನ ಪೋಷಕರ ವರ್ತನೆ ನಿಜಕ್ಕೂ ವಿಚಿತ್ರವಾಗಿದೆ. ಮಹಾರಾಷ್ಟ್ರದಲ್ಲಿ ಮಾರ್ಚ್ 9ರಂದು 12 ವರ್ಷದ ಬಾಲಕ ಮನೆಬಿಟ್ಟು ಹೋಗಿದ್ದ.

ಮೂರು ದಿನಗಳ ಬಳಿಕ ಪೇದೆಯೊಬ್ಬ ಅವನನ್ನು ಪತ್ತೆ ಮಾಡಿ, ಮಕ್ಕಳ ರಿಮಾಂಡ್ ಹೋಮ್ ಗೆ ಕರೆತಂದಿದ್ದ. ಬಾಲಕ ಸಿಕ್ಕಿರುವ ಬಗ್ಗೆ ಆತನ ತಂದೆಗೆ ಪೊಲೀಸರು ಮಾಹಿತಿ ನೀಡಿದ್ರು. ಆದ್ರೆ ಮಗನನ್ನು ಮರಳಿ ಮನೆಗೆ ಕರೆದೊಯ್ಯಲು ತನಗೆ ಆಸಕ್ತಿಯಿಲ್ಲ ಎಂದುಬಿಟ್ಟ ಆ ತಂದೆ.

ಅಷ್ಟೇ ಅಲ್ಲ 18 ವರ್ಷವಾಗುವವರೆಗೂ ಮಕ್ಕಳ ಆಶ್ರಯ ತಾಣದಲ್ಲಿ ಅವನನ್ನು ಅತಿಥಿಯಾಗಿ ಇರಿಸಿಕೊಳ್ಳಿ ಅಂತಾ ಹೇಳಿದ್ದಾನೆ. ತಂದೆಯ ಮಾತು ಕೇಳಿ ಪೊಲೀಸರಿಗೇ ದಿಗ್ಭ್ರಮೆಯಾಗಿತ್ತು. ಬಾಲಕನಿಗೆ ಕೂಡ ಮನೆಗೆ ಹೋಗಲು ಇಷ್ಟವಿಲ್ಲ ಎನ್ನುತ್ತಿದ್ದಾರೆ ಪೊಲೀಸರು. ಯಾಕಂದ್ರೆ ಮನೆಯ ವಿಳಾಸ ಗೊತ್ತಿದ್ದರೂ ಆತ ಅದನ್ನು ಪೊಲೀಸರಿಗೆ ಹೇಳಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...