alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಹೇಳಿದ್ದಕ್ಕೆ ಅಪ್ರಾಪ್ತನ ಕೊಲೆ ಮಾಡ್ದ 12 ರ ಬಾಲಕ

ಬಿಹಾರದ ಅರಿರಿಯಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕ 10 ವರ್ಷದ ಸ್ನೇಹಿತನ ಕತ್ತು ಕತ್ತರಿಸಿ ಕೊಲೆ ಮಾಡಿದ್ದಾನೆ. ಪೊಲೀಸರು ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದು ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ.

ತಂದೆ ಹಾಗೂ ದೊಡ್ಡಪ್ಪ ಬಾಲಕನನ್ನು ಕೊಲೆ ಮಾಡುವಂತೆ ಹೇಳಿದ್ರು. ಹಾಗಾಗಿ ಕತ್ತು ಕತ್ತರಿಸಿದೆ ಎಂದು ಬಾಲಕ ಹೇಳಿದ್ದಾನೆ. ಬರಹಠ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಮೀನು ವಿಚಾರಕ್ಕೆ 2 ಕುಟುಂಬಗಳ ಮಧ್ಯೆ  ವಿವಾದ ನಡೆಯುತ್ತಿತ್ತು. ಮೃತ ಬಾಲಕನನ್ನು ಬಿಸ್ಕಿಟ್ ಕೊಡುವ ನೆಪದಲ್ಲಿ ತೋಟಕ್ಕೆ ಕರೆದ ಆರೋಪಿ ಬಾಲಕ ತರಕಾರಿ ಕತ್ತರಿಸುವ ಚಾಕುವಿನಲ್ಲಿ ಕತ್ತು ಕತ್ತರಿಸಿದ್ದಾನೆ.

ತಂದೆ ಹಾಗೂ ದೊಡ್ಡಪ್ಪನ ಹೇಳಿಕೆ ಮೇರೆಗೆ ವಿರೋಧಿ ಕುಟುಂಬದ ಬಾಲಕನನ್ನು ಆರೋಪಿ ಕೊಲೆ ಮಾಡಿದ್ದಾನೆ. ದೊಡ್ಡಪ್ಪ ಹಾಗೂ ತಂದೆ ಕೂಡ ಘಟನೆ ನಂತ್ರ ನಾಪತ್ತೆಯಾಗಿದ್ದಾರೆ. ಘಟನೆಗೆ ಮುಖ್ಯ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆರಂಭಿಕ ತನಿಖೆಯಲ್ಲಿ ಜಮೀನು ವಿವಾದ ಕೊಲೆಗೆ ಕಾರಣ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...