alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಬೆಂಕಿ ದುರಂತದಲ್ಲಿ 12 ಮಂದಿ ಬಲಿ

ಮುಂಬೈನ ಅಂಧೇರಿಯಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದೆ. ಸಕೀನಕ ಪ್ರದೇಶದಲ್ಲಿರೋ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು, 12 ಜನರು ಮೃತಪಟ್ಟಿದ್ದಾರೆ.  ಅಪಾರ ಪ್ರಮಾಣದ ಹಾನಿ ಕೂಡ ಸಂಭವಿಸಿದೆ. ಬೆಂಕಿ ಅನಾಹುತದಲ್ಲಿ ಗಾಯಗೊಂಡವರನ್ನು ರಾಜವಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಕ್ಷ್ಮಿ ನಾರಾಯಣ ದೇವಸ್ಥಾನದ ಸಮೀಪವಿರುವ ಮಳಿಗೆ ಇದು. ಇವತ್ತು ಬೆಳಗ್ಗೆ ದಿಢೀರನೆ ಬೆಂಕಿ ಕಾಣಿಸಿಕೊಂಡಿತ್ತು. ಮೂರು ಅಗ್ನಿಶಾಮಕ ದಳ ಹಾಗೂ ನಾಲ್ಕು ನೀರಿನ ಟ್ಯಾಂಕರ್ ಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಕರೆಸಲಾಗಿತ್ತು. ಒಳಗೆ ಸಿಲುಕಿದ್ದವರನ್ನು ರಕ್ಷಿಸಲು ಸಿಬ್ಬಂದಿ ಶತಾಯ ಗತಾಯ ಪ್ರಯತ್ನಪಟ್ಟಿದ್ದಾರೆ.

ಬೆಂಕಿಯ ತೀವ್ರತೆಯಿಂದ ಕಟ್ಟಡ ಕೂಡ ಕುಸಿದಿದೆ. ಹಾಗಾಗಿ ಒಳಗಿದ್ದವರಿಗೆ ಹೊರಕ್ಕೆ ಓಡಿ ಬರಲು ಸಾಧ್ಯವಾಗಿಲ್ಲ. ಅವಶೇಷಗಳಡಿ ಸಿಲುಕಿ ಪ್ರಾಣಬಿಟ್ಟಿದ್ದಾರೆ. ಅದೃಷ್ಟವಶಾತ್ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...