alex Certify
ಕನ್ನಡ ದುನಿಯಾ       Mobile App
       

Kannada Duniya

ಬಾರ್ ಕೌನ್ಸಿಲ್ ನೀಡಿದೆ ಬೆಚ್ಚಿ ಬೀಳಿಸುವ ಸುದ್ದಿ

sc

ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿ.ಸಿ.ಐ.) ನೀಡಿರುವ ಮಾಹಿತಿ ಆತಂಕ ಮೂಡಿಸುವಂತಿದೆ. ದೇಶದಲ್ಲಿರುವ ನ್ಯಾಯವಾದಿಗಳಲ್ಲಿ ಶೇ. 60 ರಷ್ಟು ಮಂದಿ ನಕಲಿ ಎಂದು ಬಿ.ಸಿ.ಐ. ತಿಳಿಸಿದೆ.

ದೇಶದ ನ್ಯಾಯಾಲಯಗಳಲ್ಲಿರುವ ಸುಮಾರು 20 ಲಕ್ಷ ವಕೀಲರಲ್ಲಿ 12 ಲಕ್ಷ ವಕೀಲರು ನಕಲಿ ಎಂದು ಹೇಳಲಾಗಿದ್ದು, ಅಲ್ಲಿಗೆ ಅಸಲಿಗಿಂತ ನಕಲಿ ವಕೀಲರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕದ ವಿಷಯವಾಗಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಕಲಿ ನ್ಯಾಯವಾದಿಗಳ ಕುರಿತು ಪ್ರಸ್ತಾಪಿಸಿದ್ದರು.

ಇಂತಹ ನಕಲಿ ನ್ಯಾಯವಾದಿಗಳ ಸಂಖ್ಯೆ ಶೇ. 30 ರಷ್ಟು ಇರಬಹುದೆಂದು ಹೇಳಲಾಗಿತ್ತು. ಆದರೆ, ಅಸಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ವಕೀಲರು ಇರುವುದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಾಹಿತಿ ನೀಡಿದ್ದು, ಇಂತಹವರ ಸಂಖ್ಯೆ ಶೇ. 60 ರಷ್ಟಿದೆ ಎಂದು ಅಂದಾಜಿಸಿದೆ.

ಈ ಹಿನ್ನಲೆಯಲ್ಲಿ ಕಾನೂನು ಪದವಿ ಪಡೆದವರು ನೋಂದಣಿ ಮತ್ತು ನವೀಕರಣ ಮಾಡಲು ಹೊಸ ನಿಯಮ ರೂಪಿಸಿದೆ. ಕಾಲೇಜ್, ವಿಶ್ವವಿದ್ಯಾಲಯಗಳಲ್ಲಿ ಪಡೆದ ಪದವಿ ಪ್ರಮಾಣ ಪತ್ರಗಳನ್ನು ಪುನರ್ ಪರಿಶೀಲಿಸಿ, ದೃಢೀಕರಣ ಪಡೆಯಬೇಕೆಂದು ಸೇರಿದಂತೆ ಹಲವು ಸೂಚನೆ ನೀಡಿದೆ. ಈಗಾಗಲೇ ರಾಜ್ಯ ಬಾರ್ ಕೌನ್ಸಿಲ್ ಗಳಿಗೆ ಅಗತ್ಯ ಮಾಹಿತಿ ರವಾನಿಸಿದ್ದು, ನಕಲಿ ವಕೀಲರಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...