alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಬಾಲಕ!

lin

ಕಳೆದ ಮೂರು ತಿಂಗಳುಗಳಿಂದ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಪ್ರಭುಪುರ ಗ್ರಾಮದವರಿಗೆಲ್ಲ ಒಂದೇ ಭಯ. ತಮ್ಮ ಒಳ ಉಡುಪು ಯಾವ ಕ್ಷಣದಲ್ಲಾದ್ರೂ ಮಾಯವಾಗಬಹುದು ಅನ್ನೋ ಆತಂಕ. ಒಣಹಾಕಿದ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ವು.

ಮುಜುಗರಪಟ್ಟುಕೊಂಡ ಮಹಿಳೆಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ದಿನೇ ದಿನೇ ಒಳಉಡುಪು ಕಳ್ಳನ ಹಾವಳಿ ಹೆಚ್ಚಾಗಿದ್ರಿಂದ ಕೊನೆಗೆ ಮಹಿಳೆಯರು ಗ್ರಾಮದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಒಳ ಉಡುಪುಗಳನ್ನು ಕದಿಯುತ್ತಿದ್ದವನು 11 ವರ್ಷದ ಬಾಲಕ.

ಗ್ರಾಮದ ಮುಖ್ಯಸ್ಥೆಯಾಗಿರೋ ಸುನೀತಾ ತ್ರಿಪಾಠಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಒಳ ಉಡುಪುಗಳನ್ನು ಬಿಟ್ಟು ಬೇರೆ ಯಾವ ಬಟ್ಟೆಯನ್ನೂ ಬಾಲಕ ಮುಟ್ಟುತ್ತಿರಲಿಲ್ಲ. ಮೊದಲು ಕಳ್ಳನನ್ನು ಹಿಡಿಯಲು ಮಹಿಳೆಯರೆಲ್ಲ ಪ್ರಯತ್ನಪಟ್ಟಿದ್ದಾರೆ.

ಆದ್ರೆ ಸಾಧ್ಯವಾಗದೇ ಇದ್ದಾಗ ಗ್ರಾಮದ ಮುಖ್ಯಸ್ಥೆ ಬಳಿ ಹೋಗಿದ್ದಾರೆ. ಆದ್ರೆ ಪೊಲೀಸರಿಗೆ ದೂರು ಕೊಡಲು ಮುಂದಾಗಿಲ್ಲ. ಕೊನೆಗೆ ಗ್ರಾಮಸ್ಥನೊಬ್ಬ ಯಾರಿಗೂ ಗೊತ್ತಿಲ್ಲದಂತೆ ಪೊಲೀಸರಿಗೆ ವಿಷಯ ತಿಳಿಸಿದ್ದ. ಕೊನೆಗೆ ಪೊಲೀಸರೇ ಕಳ್ಳನನ್ನು ಪತ್ತೆ ಮಾಡಿದ್ದಾರೆ. ಒಳ ಉಡುಪುಗಳನ್ನು ಹೊರಗೆ ಒಣಹಾಕಿದ ಮಹಿಳೆಯರದ್ದೇ ತಪ್ಪು ಎನ್ನುತ್ತಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...