alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ನಲ್ಲಿದ್ದಾರೆ ದೇಶದ ಹಿರಿಯ ಮಹಿಳೆ

119-year-old-from-hyderabad-is-countrys-oldest-womanಹೈದ್ರಾಬಾದ್ ನ ವನಸ್ಥಲಿಪುರಂ ನಿವಾಸಿ 119 ವರ್ಷದ ತೇಕುಮಾಟ್ಲಾ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಲಾಗಿದೆ. 1898 ಜನವರಿ 1 ರಂದು ನರಸಮ್ಮ, ರಂಗಾರೆಡ್ಡಿ ಜಿಲ್ಲೆಯ ಅದಿಬಾಟ್ಲಾ ಸಮೀಪದ ಬೊಂಗ್ಲೂರು ಗ್ರಾಮದಲ್ಲಿ ಜನಿಸಿದ್ದು, ಈಗ ವನಸ್ಥಲಿಪುರಂನಲ್ಲಿ ಪುತ್ರಿಯೊಂದಿಗೆ ವಾಸವಾಗಿದ್ದಾರೆ.

ತೇಕುಮಾಟ್ಲಾ ಜಂಗಯ್ಯ ಎಂಬವರ ಜೊತೆ ವಿವಾಹವಾದ ಬಳಿಕ ನರಸಮ್ಮ ವನಸ್ಥಲಿಪುರಂನಲ್ಲಿದ್ದು, ಇವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಳು. ಪುತ್ರರೆಲ್ಲರೂ ಬಾಲ್ಯದಲ್ಲಿಯೇ ಸಾವನ್ನಪ್ಪಿದ್ದು, ಪತಿ ಜಂಗಯ್ಯ ನಿಧನರಾದ ಬಳಿಕ ನರಸಮ್ಮ, ತಮ್ಮ ಪುತ್ರಿ 74 ವರ್ಷದ ಪೆಂಟಮ್ಮಳ ಜೊತೆ ವಾಸಿಸುತ್ತಿದ್ದಾರೆ.

ತಮ್ಮ ತಾಯಿ ಈಗಲೂ ಆರೋಗ್ಯವಾಗಿದ್ದಾರೆಂದು ಹೇಳಿರುವ ಪೆಂಟಮ್ಮ, ದಿನಕ್ಕೆ ಮೂರು ಬಾರಿ ಊಟ ಮಾಡುವ ಅವರು, ಜ್ವರ, ಶೀತಕ್ಕೆ ಮಾತ್ರೆ ತೆಗೆದುಕೊಂಡೇ ಇಲ್ಲವೆಂದು ತಿಳಿಸಿದ್ದಾರೆ. ಈ ಹಿಂದೆ ತ್ರಿಶೂರಿನ ಕುಂಜಮ್ಮರನ್ನು ದೇಶದ ಹಿರಿಯ ಮಹಿಳೆ ಎಂದು ಗುರುತಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...