alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರಂಪರಿಕ ಉಗಿ ಬಂಡಿಗೀಗ ಫುಲ್ ಡಿಮ್ಯಾಂಡ್

ಶಿಮ್ಲಾದಲ್ಲಿರುವ 113 ವರ್ಷ ಹಳೆಯ ಉಗಿ ಬಂಡಿಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಶಿಮ್ಲಾಕ್ಕೆ ಬರುವ ಪ್ರವಾಸಿಗರು ಅದರಲ್ಲೂ ಬ್ರಿಟಿಶ್ ಪ್ರವಾಸಿಗರು ಈ ಉಗಿಬಂಡಿಗೆ ಮನ ಸೋಲುತ್ತಿದ್ದಾರೆ. ಬಹುತೇಕ ಎಲ್ಲರೂ ಶಿಮ್ಲಾದಿಂದ ಕಲ್ಕಾಕ್ಕೆ ಪ್ರಮಾಣ ಮಾಡೋಕೆ ಟಿಕೆಟ್ ಬುಕ್ ಮಾಡುತ್ತಿದ್ದಾರೆ.

ಈ ಎಂಜಿನ್ ಅನ್ನು ಬ್ರಿಟಿಷ್ ಕಂಪನಿಯೊಂದು ಆಗಿನ ಕಾಲದಲ್ಲಿ 30 ಸಾವಿರ ರೂ. ಗೆ ನಿರ್ಮಿಸಿಕೊಟ್ಟಿತ್ತು. ಈಗ ಈ ಉಗಿ ಬಂಡಿಯ ಒಂದು ಟ್ರಿಪ್ ಟಿಕೆಟ್ ಬೆಲೆ ಬರೋಬ್ಬರಿ 1 ಲಕ್ಷ ರೂ. ಇದಕ್ಕೆ ಹೆಚ್ಚಾಗಿ ಲಂಡನ್ ಪ್ರವಾಸಿಗರೇ ಆಕರ್ಷಿತರಾಗುತ್ತಾರೆ. ಇನ್ನು ಇಲ್ಲಿನ 3 ಕೋಚ್ ಗಳಲ್ಲಿ 30 ಮಂದಿ ಪ್ರಯಾಣಿಸಬಹುದಾಗಿದೆ.

ಇಂತಹ ಹೆರಿಟೇಜ್ ಟ್ರಾಕ್ ನಲ್ಲಿ ಪ್ರಯಾಣ ಮಾಡುವುದು ಖುಷಿ ತಂದಿದೆ. ಹಾಗೆಯೇ ಇದೊಂದು ಅದ್ಭುತ ಅನುಭವ. ಬ್ರಿಟಿಷರೇ ನಿರ್ಮಿಸಿರುವ ಈ ಟ್ರ್ಯಾಕ್ ನಲ್ಲಿ ಮತ್ತೆ ಪ್ರಯಾಣ ಮಾಡುತ್ತಿರುವುದು ಇನ್ನಷ್ಟು ಸಂತೋಷ ಎನ್ನುತ್ತಾರೆ ಬ್ರಿಟಿಷ್ ಪ್ರವಾಸಿಗರು. 2009 ರಲ್ಲಿ ಯುನೆಸ್ಕೋ ಶಿಮ್ಲಾ–ಕಲ್ಕಾ ರೈಲ್ವೇಯನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...