alex Certify
ಕನ್ನಡ ದುನಿಯಾ       Mobile App
       

Kannada Duniya

ಪುಸ್ತಕ ರಕ್ಷಿಸಲು ಹೋದ ಬಾಲಕ ನೀರು ಪಾಲು

drown

ನೀರಿನಲ್ಲಿ ಬಿದ್ದಿದ್ದ ಖುರಾನ್ ಪುಸ್ತಕ ತರಲು ಹೋದ 11 ವರ್ಷದ ಬಾಲಕನೊಬ್ಬ ಮುಳುಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಶಾಹೀನಗರದಲ್ಲಿರೋ ಮದರಸಾದಲ್ಲಿ ಲಖ್ನೋ ಮೂಲದ ಮೊಹಮ್ಮದ್ ಫಯಾಜ್ ಖುರಾನ್ ಕೋರ್ಸ್ ಕಲಿಯುತ್ತಿದ್ದ.

ಬೆಳಗ್ಗೆ 9 ಗಂಟೆ ವೇಳೆಗೆ ಮದರಸಾದಿಂದ 500 ಮೀಟರ್ ದೂರದಲ್ಲಿರೋ ಸ್ಯಾಂಡಲ್ ಕಿ ಬೌಲಿ ಅನ್ನೋ ಟ್ಯಾಂಕ್ ಗೆ ನಾಲ್ವರು ಸ್ನೇಹಿತರ ಜೊತೆಗೆ ತೆರಳಿದ್ದ. ಖುರಾನ್ ಪುಸ್ತಕವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಬಾಲಕರು ಗಮನಿಸಿದ್ದಾರೆ.

ಅದನ್ನು ನೋಡಿದ ಫಯಾಜ್, ಕೂಡಲೇ ಶರ್ಟ್ ಕಳಚಿಟ್ಟು ಆ ಪುಸ್ತಕವನ್ನು ತರಲು ನೀರಿಗೆ ಹಾರಿದ್ದಾನೆ. ಸರಿಯಾಗಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಅದನ್ನು ನೋಡಿದ ಆತನ ಸ್ನೇಹಿತರು ಕೂಡಲೇ ಮದರಸಾ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ರು.

ಪೊಲೀಸರು ಹಾಗೂ ಮುಳುಗು ತಜ್ಞರು ಕೂಡ ಸ್ಥಳಕ್ಕೆ ಬಂದು ಬಾಲಕನಿಗಾಗಿ ಶೋಧಕಾರ್ಯ ನಡೆಸಿದ್ರು. ಆದ್ರೆ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಬಾಲಕನ ಪತ್ತೆಯಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...