alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಪುಟ್ಟ ಬಾಲಕ

ತೆಲಂಗಾಣದ ಕರೀಂ ನಗರದಲ್ಲಿ 11 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ತಂದೆ ತನಗೆ ಹೊಡೆದು ಬಡಿದು ಹಿಂಸಿಸ್ತಾನೆ ಅಂತಾ ಆರೋಪಿಸಿದ್ದಾನೆ. ಮೋಲುಗುರಿ ಶಶಿಕುಮಾರ್ ಎಂಬ ಬಾಲಕ ಜಮ್ಮಿಕುಂಟಾ ಪೊಲೀಸ್ ಠಾಣೆಗೆ ಪತ್ರವೊಂದನ್ನು ಬರೆದಿದ್ದಾನೆ.

ಕಳೆದ ಕೆಲವು ತಿಂಗಳುಗಳಿಂದ ತಂದೆ ಶ್ರೀನಿವಾಸ್ ತನಗೆ ಇನ್ನಿಲ್ಲದ ಹಿಂಸೆ ಕೊಡ್ತಿದ್ದಾನೆ. ಅಪ್ಪನ ಜೊತೆಗಿರಲು ನನಗೆ ಇಷ್ಟವಿಲ್ಲ, ದಯವಿಟ್ಟು ಹಾಸ್ಟೆಲ್ ಗೆ ಸೇರಿಸಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಬಾಲಕನ ತಂದೆ ಕುಡುಕನಾಗಿದ್ದು, ಪತ್ನಿ ರಮ್ಯಾಗೆ ಕೂಡ ಹೊಡೆಯುತ್ತಿದ್ದ.

ರಾತ್ರಿ ಕುಡಿದು ಬಂದ ತನ್ನನ್ನು ಪತ್ನಿ ಸರಿಯಾಗಿ ಮಾತನಾಡಿಸಿಲ್ಲ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದು ಮಗನಿಗೆ ಹೊಡೆದಿದ್ದ. ಮೆಣಸಿನ ಪುಡಿಯನ್ನು ಮೈಮೇಲೆ ಹಾಕಿ ಹಿಂಸಿಸಿದ್ದ. ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಅವನನ್ನು ಜೈಲಿಗಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...