alex Certify
ಕನ್ನಡ ದುನಿಯಾ       Mobile App
       

Kannada Duniya

11 ವರ್ಷದ ಬಾಲಕಿ ತಾಯಿಯಾದ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ಗುಜರಾತ್ ನ ರಾಜ್ಕೋಟ್ ನಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾಯಿಯಾಗಿದ್ದಾಳೆ. ಮಾರ್ಚ್ 17ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನವಜಾತ ಶಿಶು ಬದುಕುಳಿಯುತ್ತಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

11 ವರ್ಷದ ಬಾಲಕಿ ಮೇಲೆ 9-10 ತಿಂಗಳಿಂದ ನಿರಂತರ ಅತ್ಯಾಚಾರ ನಡೆಯುತ್ತಿತ್ತು. ಒಂದಲ್ಲ ಎರಡಲ್ಲ ಅನೇಕ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದು ಒಂದು ಕಡೆ. ಅನುವಂಶಿಕ ಸಮಸ್ಯೆ ಇನ್ನೊಂದು ಕಡೆ. ಪೌಷ್ಠಿಕಾಂಶದ ಕೊರತೆ ಮತ್ತೊಂದು ಕಡೆ. ಈ ಎಲ್ಲದರಿಂದಾಗಿ ಬಾಲಕಿ ಹೊಟ್ಟೆಯಲ್ಲಿದ್ದ ಮಗು ಸರಿಯಾಗಿ ಬೆಳವಣಿಗೆ ಆಗಲಿಲ್ಲ.

ಬಾಲಕಿಗೆ 8ನೇ ತಿಂಗಳಲ್ಲೇ ಹೆರಿಗೆಯಾಗಿದೆ. ಜನ್ಮಜಾತ ಪಾರ್ಶ್ಚವಾಯುವಿನಿಂದ ನವಜಾತ ಶಿಶು ಬಳಲುತ್ತಿದೆ. ಶಿಶು ಒಂದುವರೆ ಕೆ.ಜಿ ತೂಕವಿದೆ.  ಸ್ಪಿನಾ ಬೈಫಿಡಾ ರೋಗದಿಂದ ಬಳಲುತ್ತಿರುವ ಮಗುವನ್ನು ಉಳಿಸೋದು ಕಷ್ಟವೆಂದು ವೈದ್ಯರು ಹೇಳಿದ್ದಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿ ಮಗು ಉಳಿದ್ರೂ ಪಾರ್ಶ್ಚವಾಯು ಮಗುವನ್ನು ಕಾಡಲಿದೆ. ವೈದ್ಯರ ಸಹಾಯದಿಂದ ಎಲ್ಲ ಸರಿಯಾದ್ರೂ ಮಗು ಅನಾಥಾಶ್ರಮ ಸೇರಲೇಬೇಕು.

ಬಾಲಕಿ ಬಡಕುಟುಂಬದವಳು.ತಂದೆಗೆ ಮಾನಸಿಕ ಸಮಸ್ಯೆಯಿದೆ. ತಾಯಿ ಅಲ್ಲಿ ಇಲ್ಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ತಿದ್ದಾಳೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಮಗುವನ್ನು ಬಾಲಕಿ ನೋಡಿಕೊಂಡ್ರೆ ಆಕೆ ಭವಿಷ್ಯ ಹಾಳಾಗುತ್ತದೆ ಎಂದು ತಾಯಿ ನವಜಾತ ಶಿಶುವನ್ನು ನಿರಾಕರಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...