alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿ ಪ್ರವೇಶಿಸಿದ್ದ ಪಾಕ್ ಬಾಲಕನಿಗೆ ಸಿಹಿ ಕೊಟ್ಟು ಕಳುಹಿಸಿದ ಭಾರತೀಯ ಯೋಧರು

 

ಆಕಸ್ಮಿಕವಾಗಿ ದಾರಿ ತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಬಾಲಕನಿಗೆ ಹೊಸ ಬಟ್ಟೆ ತೊಡಿಸಿ ಸಿಹಿ ತಿಂಡಿಗಳೊಂದಿಗೆ ಭಾರತೀಯ ಯೋಧರು ವಾಪಾಸ್ ಕಳುಹಿಸಿ ಕೊಟ್ಟಿರುವ ಮಾನವೀಯ ಘಟನೆ ನಡೆದಿದೆ.

ನಾಲ್ಕು ದಿನಗಳ ಹಿಂದೆ ಪಾಕಿಸ್ತಾನದ 11 ವರ್ಷದ ಬಾಲಕ ದಾರಿ ತಪ್ಪಿ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತದ ಗಡಿ ಪ್ರವೇಶಿಸಿದ್ದ. ಈತನನ್ನು ಕಂಡ ಭಾರತೀಯ ಯೋಧರು ಹಿಡಿದು ಜಮ್ಮು ಕಾಶ್ಮೀರ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ವಿಚಾರಣೆ ವೇಳೆ ಬಾಲಕ ಆಕಸ್ಮಿಕವಾಗಿ ಪ್ರವೇಶಿಸಿರುವುದು ತಿಳಿದು ಬಂದಿತ್ತು. ಕೂಡಲೇ ಈ ಕುರಿತು ಪಾಕಿಸ್ತಾನ ಅಧಿಕಾರಿಗಳಿಗೆ ಮಾಹಿತಿ ನೀಡಿದ ಭಾರತೀಯ ಸೇನಾಧಿಕಾರಿಗಳು ಬಾಲಕನಿಗೆ ಹೊಸ ಬಟ್ಟೆ ಕೊಡಿಸಿ ಸಿಹಿ ತಿಂಡಿಗಳೊಂದಿಗೆ ಮರಳಿ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...