alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಕೊನೆಯುಸಿರೆಳೆದ 11 ತಿಂಗಳ ಮಗು

ಕತಾರ್ ಏರ್ವೇಸ್ ವಿಮಾನದಲ್ಲಿ ದುರಂತವೊಂದು ನಡೆದಿದೆ. 11 ತಿಂಗಳ ಮಗು ಸಾವನ್ನಪ್ಪಿದೆ. ವಿಮಾನ ಎಸ್ಆರ್ -500 ದೋಹಾದಿಂದ ಹೈದ್ರಾಬಾದ್ ಗೆ ಬರ್ತಿತ್ತು ಎನ್ನಲಾಗಿದೆ. ವಿಮಾನದಲ್ಲಿ ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಎಸ್ಆರ್-500 ವಿಮಾನ ದೋಹಾದಿಂದ ಹೈದ್ರಾಬಾದ್ ಗೆ ಬರ್ತಾಯಿತ್ತು. 11 ತಿಂಗಳ ಮಗು ಅರ್ನವ್ ವರ್ಮಾ, ಪಾಲಕರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದ. ವಿಮಾನದಲ್ಲಿ ಬಾಲಕ ಉಸಿರಾಟ ಸಮಸ್ಯೆ ಎದುರಿಸಿದ್ದ ಎನ್ನಲಾಗಿದೆ.

ಹೈದ್ರಾಬಾದ್ ನ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿಯುತ್ತಿದ್ದಂತೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಲಕನನ್ನು ಅಪೋಲೋ ಮೆಡಿಕಲ್ ಸೆಂಟರ್ ಗೆ ಕರೆದೊಯ್ಯಲಾಗಿದೆ. ಆದ್ರೆ ಆಗ್ಲೇ ಬಾಲಕ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...