alex Certify
ಕನ್ನಡ ದುನಿಯಾ       Mobile App
       

Kannada Duniya

ಆಡು ಮಾರಿ ಶೌಚಾಲಯ ಕಟ್ಟಿಸಿದ್ದ ಕುನ್ವರ್ ಬಾಯಿ ಇನ್ನಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ‘ಸ್ವಚ್ಛ ಭಾರತ್ ಅಭಿಯಾನ’ ಆರಂಭಗೊಂಡ ಸಂದರ್ಭದಲ್ಲಿ ಇದರಿಂದ ಪ್ರೇರಿತಗೊಂಡು, ಕಡು ಬಡತನವಿದ್ದರೂ ತನ್ನ 8-10 ಆಡುಗಳನ್ನು ಮಾರಾಟ ಮಾಡಿ ಶೌಚಾಲಯ ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದ ಛತ್ತೀಸ್ಗಡದ 106 ವರ್ಷದ ಕುನ್ವರ್ ಬಾಯಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕುನ್ವರ್ ಬಾಯಿಯವರನ್ನು ಛತ್ತಿಸ್ಗಡದ ಮುಖ್ಯ ಮಂತ್ರಿ ರಮಣ್ ಸಿಂಗ್ ರವರ ಸೂಚನೆ ಮೇರೆಗೆ ರಾಯ್ಪುರದ ಡಾ.ಭೀಮ್ ರಾವ್ ಅಂಬೇಡ್ಕರ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

2016 ರಲ್ಲಿ ಕುನ್ವರ್ ಬಾಯಿ ಆಡುಗಳನ್ನು ಮಾರಾಟ ಮಾಡುವ ಮೂಲಕ ಅದರಲ್ಲಿ ಬಂದ ಹಣದಿಂದ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದರು. ಈ ವಿಚಾರ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ಬಂದಿದ್ದು, ಕುನ್ವರ್ ಬಾಯಿಯನ್ನು ಸಮಾರಂಭವೊಂದರಲ್ಲಿ ಗೌರವಿಸಿದ್ದರಲ್ಲದೆ ಕಾಲು ಮುಟ್ಟಿ ನಮಸ್ಕರಿಸಿದ್ದರು.

ಕುನ್ವರ್ ಬಾಯಿಯವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಛತ್ತಿಸ್ಗಡ ಮುಖ್ಯಮಂತ್ರಿ ರಮಣಸಿಂಗ್ ರವರು, ಕುನ್ವರ್ ಬಾಯಿಯವರು ನಮ್ಮನ್ನು ಅಗಲಿದ್ದರೂ ಅವರು ಮಾಡಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...