alex Certify
ಕನ್ನಡ ದುನಿಯಾ       Mobile App
       

Kannada Duniya

106 ವರ್ಷದ ಅಜ್ಜಿ ಈಗ ಯುಟ್ಯೂಬ್ ಸ್ಟಾರ್

590340-granny

ಆಂಧ್ರಪ್ರದೇಶದ ಈ ಹಿರಿಯಜ್ಜಿಗೆ 106 ವರ್ಷ. ಅಜ್ಜಿ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಸ್ಟಾರ್. ಮಸ್ತಾನಮ್ಮ ಯುಟ್ಯೂಬ್ ನಲ್ಲಿ ‘ಕಂಟ್ರಿ ಫುಡ್ಸ್’ ಎಂಬ ಚಾನೆಲ್ ಹೊಂದಿದ್ದಾಳೆ. ಅದಕ್ಕೆ 2,63,000 ಸಬ್ ಸ್ಕ್ರೈಬರ್ ಗಳಿದ್ದಾರೆ. ಹೈದ್ರಾಬಾದ್ ನ ಕೆ.ಲಕ್ಷ್ಮಣ್ ಮತ್ತು ಶ್ರೀನಾಥ್ ರೆಡ್ಡಿ ಈ ಯುಟ್ಯೂಬ್ ಚಾನೆಲ್ ನ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.

‘ಕಂಟ್ರಿ ಫುಡ್ಸ್’ ಚಾನೆಲ್ ನಲ್ಲಿ ಮಸ್ತಾನಮ್ಮ ಪಕ್ಕಾ ದೇಸೀ ಅಡುಗೆಗಳನ್ನು ಮಾಡ್ತಾರೆ. ಎಗ್ ಕರಿ, ಫಿಶ್ ಫ್ರೈ, ಕಲ್ಲಂಗಡಿ ಚಿಕನ್ ಹೀಗೆ ಅಜ್ಜಿ ಮಾಡೋ ನಾನ್ ವೆಜ್ ಡಿಶ್ ಗಳು ಮಾಂಸಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿವೆ.

ಮಸ್ತಾನಮ್ಮ ಅಡುಗೆಗಾಗಿ ವಿಶೇಷ ಸಾಮಗ್ರಿಗಳನ್ನೇನೂ ಬಳಸುವುದಿಲ್ಲ. ಮನೆಯಲ್ಲಿ ಸುಲಭವಾಗಿ ದೊರೆಯುವ ವಸ್ತುಗಳನ್ನೇ ಹಾಕಿ ಸಿಂಪಲ್ ಆಗಿ ಸಖತ್ ಟೇಸ್ಟಿಯಾಗಿ ಅಡುಗೆ ಮಾಡ್ತಾಳೆ. ಆಕೆಯ ಕುಕಿಂಗ್ ಸ್ಟೈಲೇ ಬೇರೆ.

11 ವರ್ಷದವಳಿದ್ದಾಗ್ಲೇ ಮಸ್ತಾನಮ್ಮಗೆ ಮದುವೆಯಾಗಿತ್ತು. 22 ವರ್ಷದವಳಿದ್ದಾಗ್ಲೇ ಆಕೆ ಪತಿಯನ್ನು ಕಳೆದುಕೊಂಡಿದ್ಲು. ಐದು ಜನ ಮಕ್ಕಳಲ್ಲಿ ಈಗ ಒಬ್ಬ ಮಾತ್ರ ಬದುಕಿದ್ದಾನೆ. ಆಂಧ್ರದ ಗುಂಟೂರು ಜಿಲ್ಲೆಯ ಗುಡಿವಾಡದ ಮಸ್ತಾನಮ್ಮ ಈಗ ವರ್ಲ್ಡ್ ಫೇಮಸ್.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...