alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಪ್ರಪ್ರಥಮ Mr. Universe ಮನೋಹರ್ ಇನ್ನಿಲ್ಲ

mr universeದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಪ್ರಥಮ  Mr. Universe ಪಟ್ಟ ತಂದುಕೊಟ್ಟ ಮನೋಹರ್ ಏಕ್, ತಮ್ಮ 103 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1952 ರಲ್ಲಿ  Mr. Universe ಆಗಿದ್ದ ಮನೋಹರ್, ಅನಾರೋಗ್ಯದಿಂದಾಗಿ ಕೋಲ್ಕತ್ತಾದಲ್ಲಿ ಇಂದು ಸಾವನ್ನಪ್ಪಿದ್ದಾರೆ.

ಜಿಮ್ ಮತ್ತು ಬಾಡಿ ಬಿಲ್ಡಿಂಗ್ ಸೆಂಟರ್ ಗಳಿಲ್ಲದ ಕಾಲದಲ್ಲಿಯೇ ಸ್ವ ಸಾಮರ್ಥ್ಯದಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಲು ಕಾರಣರಾಗಿದ್ದ 4 ಅಡಿ 5 ಇಂಚು ಎತ್ತರವಿದ್ದ ಮನೋಹರ್ 1952 ರಲ್ಲಿ ಈ ಪಟ್ಟ ಧರಿಸಿದ್ದರು.

1942 ರಲ್ಲಿ ರಾಯಲ್ ಏರ್ಫೋರ್ಸ್ ಸೇರ್ಪಡೆಗೊಂಡಿದ್ದ ಮನೋಹರ್, ರೆಬೋ ಮಾರ್ಟಿನ್ ಅವರ ಪ್ರೋತ್ಸಾಹದಿಂದಾಗಿ ತಮ್ಮ ದೇಹವನ್ನು ಸ್ಪರ್ಧೆಗಾಗಿ ಸದೃಢಗೊಳಿಸಿದ್ದರು. 1951 ರಲ್ಲಿ ನಡೆದ  Mr. Universe ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅವರು ಮರು ವರ್ಷವೇ  Mr. Universe ಪಟ್ಟ ಗಿಟ್ಟಿಸಿಕೊಂಡಿದ್ದರು. ಏಷ್ಯನ್ ಗೇಮ್ಸ್ ನಲ್ಲಿಯೂ ಮೂರು ಸುವರ್ಣ ಪದಕಗಳನ್ನು ಗಳಿಸಿದ್ದ ಮನೋಹರ್, ತಮ್ಮ ಇಳಿ ವಯಸ್ಸಿನಲ್ಲಿಯೂ ಯುವಕರಿಗೆ ಸ್ಪೂರ್ತಿಯಾಗಿದ್ದರು. ಅವರಿಂದು ಅಗಲಿದ್ದು, ಅಭಿಮಾನಿಗಳನ್ನು ದುಃಖತಪ್ತರನ್ನಾಗಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...