alex Certify
ಕನ್ನಡ ದುನಿಯಾ       Mobile App
       

Kannada Duniya

ಹಸುವಿನ ಹೊಟ್ಟೆಯಲ್ಲಿತ್ತು 100 ಕೆ.ಜಿ. ಪ್ಲಾಸ್ಟಿಕ್ !

cow 4456ಅನಾರೋಗ್ಯಕ್ಕೊಳಗಾಗಿದ್ದ ಹಸುವೊಂದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ ಪಶು ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹಸುವಿನ ಹೊಟ್ಟೆಯಲ್ಲಿ ಸುಮಾರು 100 ಕೆ.ಜಿ. ಯಷ್ಟು ಪ್ಲಾಸ್ಟಿಕ್, ಕಬ್ಬಿಣದ ಮೊಳೆಗಳು, ಸಾಕ್ಸ್ ದೊರೆತಿವೆ.

ಅಹ್ಮದಾಬಾದ್ ನಲ್ಲಿ ಜೀವ್ ದಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಈ ಹಸುವನ್ನು ತರಲಾಗಿತ್ತು. ಅದರ ಪರಿಸ್ಥಿತಿಯನ್ನು ಗಮನಿಸಿದ ವೈದ್ಯರುಗಳು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈ ವೇಳೆ ಸುಮಾರು ಮೂರು ಬಕೆಟ್ ತುಂಬುವಷ್ಟು ಪ್ಲಾಸ್ಟಿಕ್ ಮತ್ತಿತ್ತರ ವಸ್ತುಗಳು ದೊರೆತಿವೆ.

ಅದರಲ್ಲೂ ನಿಷೇಧಕ್ಕೊಳಪಟ್ಟಿರುವ ನಾಲ್ಕು ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಹೆಚ್ಚಿನ ಪ್ರಮಾಣದಲ್ಲಿ ದೊರೆತಿದೆ. ಈ ಹಿಂದೆಯೂ ಇದೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಹಸುವೊಂದರ ಹೊಟ್ಟೆಯಲ್ಲಿ 40 ಕೆ.ಜಿ. ಪ್ಲಾಸ್ಟಿಕ್ ಪತ್ತೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...