alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ದೀಕ್ಷೆ ಪಡೆದ ಕೋಟ್ಯಾಧಿಪತಿ : ಪತ್ನಿಗೆ ಕಾನೂನಿನ ಅಡ್ಡಿ

100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಬಿಟ್ಟು ಸೂರತ್ನದಲ್ಲಿ ಸುಮಿತ್ ರಾಥೋಡ್ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಶನಿವಾರ ಬೆಳಿಗ್ಗೆ ಸುಮಿತ್ ಸನ್ಯಾಸಿ ದೀಕ್ಷೆ ಪಡೆದಿದ್ದಾರೆ. ಆದ್ರೆ ಪತ್ನಿ ಅನಾಮಿಕಾರಿಗೆ ಕಾನೂನು ನಿರ್ಬಂಧದ ಹಿನ್ನೆಲೆಯಲ್ಲಿ ಸನ್ಯಾಸಿ ದೀಕ್ಷೆ ಸಿಗಲಿಲ್ಲ.

ಸುಮಿತ್ ಸಂಬಂಧಿಕರು ಹಾಗೂ ಸನ್ಯಾಸಿಗಳು ಸೇರಿದಂತೆ 300 ಜನರ ಮುಂದೆ ಸನ್ಯಾಸಿ ದೀಕ್ಷೆ ಪಡೆದು ಸಂಸಾರದ ಸುಖವನ್ನು ತ್ಯಾಗ ಮಾಡಿದ್ರು. ಸಾಮಾಜಿಕ ಸಂಘಟನೆ, ಮಾನವ ಹಕ್ಕುಗಳ ಆಯೋಗ ಹಾಗೂ ಸಿಎಂ ಹೆಲ್ತ್ ಲೈನ್ ಕೂಡ ದಂಪತಿ ದೀಕ್ಷೆ ಪಡೆಯದಂತೆ ತಡೆಯಲು ಪ್ರಯತ್ನಿಸಿತ್ತು.

ದೀಕ್ಷೆ ಪಡೆದ ಸುಮಿತ್ ಗೆ ದೀಕ್ಷೆ ನೀಡಿದ ಗುರುಗಳು ಸುಮಿತಿ ಮಹಾರಾಜ್ ಎಂದು ಹೊಸ ಹೆಸರಿಟ್ಟಿದ್ದಾರೆ. ಶನಿವಾರ ಪತಿ-ಪತ್ನಿ ಇಬ್ಬರೂ ಸನ್ಯಾಸತ್ವ ಸ್ವೀಕರಿಸಬೇಕಿತ್ತು. ಆದ್ರೆ ಮೂರು ವರ್ಷದ ಮಗಳನ್ನು ಬಿಟ್ಟು ಪಾಲಕರು ಸನ್ಯಾಸತ್ವ ಸ್ವೀಕರಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ವಾಟ್ಸ್ ಅಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೊಂದೇ ಅಲ್ಲ ಸ್ಥಳೀಯ ಹೋರಾಟಗಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಅನಾಮಿಕಾ ಸನ್ಯಾಸಿ ದೀಕ್ಷೆ ಪಡೆಯಲಿಲ್ಲ. ಕಾನೂನಿನ ಅಡೆ-ತಡೆ ಮುಗಿದ ಮೇಲೆ ನಿರ್ಧಾರ ಕೈಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...