alex Certify
ಕನ್ನಡ ದುನಿಯಾ       Mobile App
       

Kannada Duniya

ರಾಧಾ-ಕೃಷ್ಣ ಪ್ರತಿಮೆಗೆ ಹಾಕುವ ಆಭರಣದ ಬೆಲೆ ಕೇಳಿದ್ರೆ ದಂಗಾಗ್ತೀರಾ

janmastmi-2016_14719

ಗ್ವಾಲಿಯರ್ ನ ಪೂಲ್ ಬಾಗನ್ ಕ್ಯಾಂಪಸ್ ಬಳಿ ಇರುವ ರಾಧಾ-ಕೃಷ್ಣ ಪ್ರತಿಮೆ ಅದ್ವಿತೀಯವಾಗಿದೆ. ಪ್ರತಿಮೆಗೆ ಹಾಕುವ ಆಭರಣಗಳಿಂದಲೇ ಅಲ್ಲಿನ ರಾಧಾ-ಕೃಷ್ಣ ಪ್ರಸಿದ್ಧಿ ಪಡೆದಿದೆ. ಅಲ್ಲಿರುವ ಆಭರಣಗಳು 3300 ಬಿಎಂಡಬ್ಲ್ಯೂ ಕಾರಿನ ಬೆಲೆಗೆ ಸಮಾನವಾಗಿದೆ. ಅಂದ್ರೆ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಅಲ್ಲಿವೆ.

ಸಿಂಧಿಯಾ ರಾಜವಂಶಸ್ಥರು ಪೂಲ್ ಬಾಗ್ ಪರಿಸರದಲ್ಲಿ ಗೋಪಾಲ ಮಂದಿರವನ್ನು ನಿರ್ಮಾಣ ಮಾಡಿದ್ದರಂತೆ. ಹಾಗೆ ರಾಧಾ-ಕೃಷ್ಣ ಪ್ರತಿಮೆಯನ್ನು ಪ್ರತಿಪ್ಠಾಪನೆ ಮಾಡಿದ್ದರು. ಆ ಸಮಯದಲ್ಲಿ ರಾಧಾ-ಕೃಷ್ಣ ಪ್ರತಿಮೆಗೆ ರತ್ನ ಖಚಿತ ಆಭರಣಗಳನ್ನು ಹಾಕಲಾಗ್ತಾ ಇತ್ತು. ಸ್ವಾತಂತ್ರ್ಯದ ನಂತ್ರ ಈ ಆಭರಣ ಬ್ಯಾಂಕ್ ಲಾಕರ್ ಸೇರ್ತು. 9 ವರ್ಷಗಳಿಂದ ಪುರಸಭೆ ಕೃಷ್ಣ ಜನ್ಮಾಷ್ಟಮಿಯಂದು ಹಳೆಯ ಆಭರಣಗಳನ್ನು ಮೂರ್ತಿಗೆ ಹಾಕಿ ಹಬ್ಬ ಆಚರಿಸಲು ಶುರುಮಾಡಿದೆ.

ಶತಮಾನಗಳಷ್ಟು ಹಳೆಯದಾಗಿರುವ ಈ ಆಭರಣಗಳ ಬೆಲೆ 100 ಕೋಟಿ ದಾಟಿದೆ. ರಾಧಾ-ಕೃಷ್ಣ ಪ್ರತಿಮೆಗೆ ಈ ಎಲ್ಲ ಆಭರಣಗಳನ್ನು ತೊಡಿಸಿದಾಗ ಬಿಗಿ ಭದ್ರತೆ ಒದಗಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...