alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗಿಸುತ್ತದೆ 10 ವರ್ಷದ ಬಾಲಕಿಯ ಸಾಧನೆ

rea and sonaliಕೇವಲ 10 ವರ್ಷದ ತೆಲಂಗಾಣದ ಬಾಲಕಿಯೊಬ್ಬಳು ಜಗತ್ತೇ ನಿಬ್ಬೆರಗಾಗಿ ನೋಡುವಂತ ಸಾಧನೆ ಮಾಡಿದ್ದಾಳೆ. 17,600 ಅಡಿ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ ವರೆಗೆ ತನ್ನ ತಾಯಿ ಜೊತೆ ಪರ್ವತಾರೋಹಣ ಮಾಡಿರುವ ಈ ಬಾಲಕಿಯ ಸಾಧನೆಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ತೆಲಂಗಾಣದ ರಿಯಾ ಈ ಸಾಧನೆ ಮಾಡಿದ ಬಾಲಕಿಯಾಗಿದ್ದು, ಈ ಸಂದರ್ಭದಲ್ಲಿ ಆಕೆಯ ತಾಯಿ ಸೋನಾಲಿ ಸಮಂತ್ ಸಾಥ್ ನೀಡಿದ್ದಾರೆ. ಮಾರಿಯಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಿಯಾ, ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಮುನ್ನ ಕಠಿಣ ತರಬೇತಿ ಪಡೆದಿದ್ದಾಳೆ.

ದಿನನಿತ್ಯ 9 ತಾಸು ತಾಯಿಯೊಂದಿಗೆ ನಡಿಗೆ ಅಭ್ಯಾಸ ಮಾಡುತ್ತಿದ್ದ ರಿಯಾ, ತಾನಿರುವ ಅಪಾರ್ಟ್ಮೆಂಟಿನ 8 ಮಹಡಿಗಳನ್ನು ಒಂದು ಗಂಟೆಯಲ್ಲಿ ಹತ್ತಿಳಿಯುತ್ತಿದ್ದಳಂತೆ. ಈ ಕಠಿಣ ಪರಿಶ್ರಮಕ್ಕೆ ಈಗ ಫಲ ದೊರೆತಿದ್ದು, ಎವರೆಸ್ಟ್ ಬೇಸ್ ಕ್ಯಾಂಪ್ ವರೆಗೆ ಹೋದ ಮೊದಲ ತಾಯಿ-ಮಗಳು ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಎವರೆಸ್ಟ್ ತುತ್ತ ತುದಿಯನ್ನು ತಲುಪಬೇಕೆಂಬ ಕನಸು ಕಾಣುತ್ತಿರುವ ರಿಯಾಗೆ ಬೆಸ್ಟ್ ಆಫ್ ಲಕ್ ಹೇಳೋಣಾ ಅಲ್ಲವೇ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...