alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನಾದ 10 ವರ್ಷದ ಬಾಲಕಿ: ಮಹತ್ವದ ನಿರ್ಧಾರ ತೆಗೆದುಕೊಂಡ ತಂದೆ

images

ದೇಶದಲ್ಲಿ ಮೊದಲ ಬಾರಿ 10 ವರ್ಷದ ಬಾಲಕಿಯೊಬ್ಬಳು ಅಮ್ಮನಾಗಿದ್ದಾಳೆ. ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಗೆ ಜನಿಸಿದ ಮಗುವಿನ ಬಗ್ಗೆ ಬಾಲಕಿ ತಂದೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಗಸ್ಟ್ 17ರಂದು ಬೆಳಿಗ್ಗೆ ಬಾಲಕಿಯ ಹೆರಿಗೆಯಾಗಿದೆ. ಚಂಡೀಗಢದ ಸೆಕ್ಟರ್ 32ರಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಗೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರಗೆ ತೆಗೆಯಲಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ತಾಯಿ-ಮಗುವಿಗೆ ಒಂದು ವಾರಗಳ ಕಾಲ ವಿಶೇಷ ಆರೈಕೆ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದೇ ಮೊದಲ ಬಾರಿ 10 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹಿಂದೆ 12 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿ ತಂದೆ ದತ್ತು ನೀಡುವ ಪ್ರಕ್ರಿಯೆ ಶುರು ಮಾಡುವಂತೆ ಮೆಡಿಕಲ್ ಕಾಲೇಜಿಗೆ ಪತ್ರ ಬರೆದಿದ್ದಾರೆ. ತನ್ನ ಮಗಳ ಭವಿಷ್ಯದ ಬಗ್ಗೆ ಚಿಂತೆ ಕಾಡ್ತಿದೆ. ಮಗಳಿಗೆ ಹುಟ್ಟಿದ ಮಗುವಿನ ಮುಖವನ್ನೂ ನಾನು ನೋಡುವುದಿಲ್ಲ. ಆ ಮಗು ನಮಗೆ ಬೇಡ ಎಂದಿದ್ದಾರೆ ಬಾಲಕಿ ತಂದೆ.

ಕೋರ್ಟ್ ಕೂಡ ಪಾಲಕರು ಒಪ್ಪಿಗೆ ನೀಡದೆ ಹೋದಲ್ಲಿ ಮಗುವನ್ನು ದತ್ತು ಕೊಡಬಹುದೆಂದು ಆದೇಶ ನೀಡಿತ್ತು. ಬಾಲಕಿಗೆ 6 ತಿಂಗಳಾದ ಮೇಲೆ ಆಕೆ ಗರ್ಭವತಿ ಎನ್ನುವ ವಿಷ್ಯ ತಿಳಿದಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಬಾಲಕಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿರಲಿಲ್ಲ. ಬಾಲಕಿ ಮಾವನೇ ಅತ್ಯಾಚಾರವೆಸಗಿದ್ದ.

 

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...