alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದ ಬಾಲಕಿಯಿಂದ ಉಳೀತು 17 ಮಂದಿ ಪ್ರಾಣ

ಮುಂಬೈನ ಕ್ರಿಸ್ಟಲ್ ಟವರ್ ಅಪಾರ್ಟ್ ಮೆಂಟ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಅಪಾರ್ಟ್ ಮೆಂಟ್ ಗೆ ಬೆಂಕಿ ಹತ್ತಿದ್ದನ್ನು ಕಂಡು, 10 ವರ್ಷದ ಬಾಲಕಿ ಸಮಯ ಪ್ರಜ್ಞೆ ಮೆರೆದಿದ್ದು, ತನ್ನ ಕುಟುಂಬಸ್ಥರು ಹಾಗೂ ನೆರೆಹೊರೆಯವರ ಜೀವ ಉಳಿಸಿದ್ದಾಳೆ.

10 ವರ್ಷದ ಝೇನ್ ಅಪಾರ್ಟ್ ಮೆಂಟ್ ಗೆ ಬೆಂಕಿ ಹತ್ತುತಿದ್ದಂತೆ, ಶಾಲೆಯಲ್ಲಿ ಹೇಳಿ ಕೊಟ್ಟ ಟ್ರಿಕ್ ಬಳಸಿದ್ದಾಳೆ. ಬೆಂಕಿ ಅವಘಡದ ವೇಳೆ ಗಾಬರಿಯಾಗದಂತೆ ಎಲ್ಲರಿಗೂ ಸೂಚಿಸಿದ್ದಾಳೆ. ಬಳಿಕ ಉಸಿರಾಡಲು ಒದ್ದೆ ಬಟ್ಟೆಯನ್ನು ಬಳಸಲು ತಿಳಿಸಿದ್ದಾಳೆ. ಹಸಿ ಬಟ್ಟೆ ಕಾರ್ಬನ್ ಹೀರಿಕೊಳ್ಳುತ್ತದೆ. ಅಲ್ಲದೆ ಉಸಿರಾಡಲು ಶುದ್ಧ ಆಮ್ಲಜನಕ ನೀಡಲು ನೆರವಾಗುತ್ತದೆ.

ಝೇನ್ ಪ್ಲಾನ್ ಬಳಸಿದ ಹಲವು ಜನ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕ ಪೋರಿ ಬೆಂಕಿ ಹತ್ತಿದಾಗ ಧೃತಿಗೆಡದೆ, ತನ್ನ ಶಾಲೆಯಲ್ಲಿ ಕಲಿಸಿದ ಪಾಠವನ್ನು ಪ್ರಯೋಗಿಸಿ, ಹಲವು ಜನರ ಪ್ರಾಣ ಕಾಪಾಡಿದ್ದಾಳೆ. ಪುಟ್ಟ ಪೋರಿ ಸಲಹೆಗಳನ್ನು ನೀಡ್ತಾ ಇದ್ದರೆ, ಸುಮಾರು 17 ಜನ ಝೇನ್ ಸೂಚಿಸಿದಂತೆ ನಡೆದ್ರು. ಪರಿಣಾಮ ಎಲ್ಲರೂ ಸುರಕ್ಷಿತರಾಗಿ ಹೊರಗೆ ಬಂದಿದ್ದಾರೆ.

ಅಗ್ನಿ ಶಾಮಕ ದಳ ನಡೆಸಿದ ರಕ್ಷಣಾ ಕಾರ್ಯದಲ್ಲಿ ಸುಮಾರು 25 ಜನರನ್ನು ಬದುಕಿಸಲಾಗಿದ್ದು, 16 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...