alex Certify
ಕನ್ನಡ ದುನಿಯಾ       Mobile App
       

Kannada Duniya

ನೀರು ಕೊಡದಕ್ಕೆ ಕೋಪಗೊಂಡ ತಂದೆ ಮಾಡಿದ್ದೇನು…?

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಂದೆಯೊಬ್ಬ 10 ವರ್ಷದ ಮಗಳನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನೀರು ಕೇಳಿದಾಗ ನೀರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ತಂದೆ ಮಗಳನ್ನು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

38 ವರ್ಷದ ಮೊಹಮ್ಮದ್ ಅಬ್ದುಲ್ ಕೊಲೆ ಆರೋಪಿ. ಡ್ರೈವರ್ ಆಗಿ ಕೆಲಸ ಮಾಡುವ ಈತನಿಗೆ ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಂದು ಮಗ. ಗುರುವಾರ ಅಬ್ದುಲ್ ಮೂರನೇ ತರಗತಿ ಓದುತ್ತಿದ್ದ ರುಕ್ಸಾನಾ ಬಳಿ ನೀರು ಕೇಳಿದ್ದಾನೆ. ಬಾಲಕಿ ನೀರು ನೀಡದೆ ಆಡಲು ಹೋಗಿದ್ದಾಳೆ.

ಕೋಪಗೊಂಡ ಅಬ್ದುಲ್ ರಸ್ತೆಗೆ ಬಂದು ಮಗಳನ್ನು ಎತ್ತಿ ನೆಲಕ್ಕೆಸೆದಿದ್ದಾನೆ. ಕೆಳಗೆ ಬಿದ್ದ ರುಕ್ಸಾನಾ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...