alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರಿಗೆ ಬುದ್ದಿ ಕಲಿಸಲು ಕಿಡ್ನಾಪ್ ಕಥೆ ಕಟ್ಟಿದ ಬಾಲೆ

Faked-kidnappingಕೇವಲ 10 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿ ತನ್ನ ತಂದೆ- ತಾಯಿ ತನಗಿಂತ ಜಾಸ್ತಿ ಹಿರಿಯ ಮಗಳನ್ನು ಪ್ರೀತಿಸುತ್ತಾರೆ ಹಾಗೂ ತಾರತಮ್ಯ ಮಾಡುತ್ತಾರೆಂದು ಕೋಪಗೊಂಡು ಮನೆ ಬಿಟ್ಟು ಹೋಗಿದ್ದು, ಪೊಲೀಸರಿಗೆ ಸಿಕ್ಕ ವೇಳೆ ಅಪಹರಣದ ಕಥೆ ಕಟ್ಟಿದ ಘಟನೆ ಪುಣೆಯಲ್ಲಿ ನಡೆದಿದೆ.

ಮೇ 5 ರಂದು ಮನೆ ಬಿಟ್ಟು ಹೋಗಿದ್ದ ಈ ಬಾಲಕಿ, ಪುಣೆ- ಬೆಂಗಳೂರು ಹೆದ್ದಾರಿ ಸಮೀಪದ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ. ಮಾರನೇ ದಿನ ಪೆಟ್ರೋಲ್ ಬಂಕ್ ನೌಕರನೊಬ್ಬನ ಕಣ್ಣಿಗೆ ಬಿದ್ದಿದ್ದು, ಆತ ವಿಚಾರಿಸಿದಾಗ ತನ್ನ ತಂದೆಯೇ ತನ್ನನ್ನು ಅಪಹರಿಸಿ, ಕೈಕಾಲು ಕಟ್ಟಿ ಪೊದೆ ಬಳಿ ಬಿಸಾಡಿದ್ದಾಗಿ ಸುಳ್ಳು ಹೇಳಿದ್ದಾಳೆ.

ಹಸಿವು, ನೀರಡಿಕೆಗಳಿಂದ ಬಳಲಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋದ ಆತ, ಆಹಾರ ನೀಡಿದ್ದಾನೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ಪೊಲೀಸರು ತಮ್ಮಲ್ಲಿ ಯಾವುದೇ ನಾಪತ್ತೆ ದೂರು ದಾಖಲಾಗಿಲ್ಲವೆಂದು ತಿಳಿಸಿದ್ದಾರೆ. ಅಂತಿಮವಾಗಿ ಪೆಟ್ರೋಲ್ ಬಂಕ್ ನೌಕರ ಪುಣೆಗೆ ಬಾಲಕಿಯನ್ನು ಕರೆದುಕೊಂಡು ಬಂದು ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದ್ದಾನೆ.

ಆಗ ಪೊಲೀಸರು, ಈ ಬಾಲಕಿ ಕಾಣೆಯಾಗಿರುವ ಕುರಿತು ಮೇ 6 ರಂದು ತಮ್ಮಲ್ಲಿ ದೂರು ದಾಖಲಾಗಿರುವುದನ್ನು ತಿಳಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವಿಚಾರಿಸಿದಾಗ ಆಕೆ ಮತ್ತೊಂದು ಕಥೆ ಕಟ್ಟಿದ್ದು, ಈಗಾಗಲೇ ಒಬ್ಬಳು ಮಗಳು ಇರುವ ಕಾರಣ ತನ್ನ ತಾಯಿಯೇ ಹೈವೈ ಬಳಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ಬಾಲಕಿಯ ಬಾಯಿಂದ ನಿಜ ಹೊರಡಿಸಲು ಪೊಲೀಸರು ಕೌನ್ಸೆಲಿಂಗ್ ಮಾಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ತಮ್ಮ ಅಸ್ತ್ರ ಪ್ರಯೋಗಿಸಿದ ಪೊಲೀಸರು, ಬಾಲಕಿ ದೂರಿನ ಮೇರೆಗೆ ಆಕೆಯ ತಂದೆ- ತಾಯಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಬೆದರಿದ ಬಾಲಕಿ ನಿಜ ಸಂಗತಿ ಬಾಯಿ ಬಿಟ್ಟಿದ್ದು, ಮನೆಯಲ್ಲಿ ತಂದೆ- ತಾಯಿ ಮೊದಲ ಮಗಳ ಬಗ್ಗೆ ಹೆಚ್ಚು ಪ್ರೀತಿ ತೋರುತ್ತಾ ನನ್ನನ್ನು ಕಡೆಗಣಿಸುತ್ತಿದ್ದರು. ಹೀಗಾಗಿ ಅವರಿಗೆ ಬುದ್ದಿ ಕಲಿಸಲು ಮನೆ ಬಿಟ್ಟು ಹೋಗಿದ್ದಾಗಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...