alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಪ್ರವೇಶಿಸಿದ್ದ ಮೂವರು ಉಗ್ರರ ಹತ್ಯೆ

delhi-commandos-fort-alert-new-the-red_3a2e6c1e-e39c-11e5-9948-13623a58218c

ದೇಶದ ಹಲವೆಡೆ ದಾಳಿ ನಡೆಸುವ ಸಲುವಾಗಿ ಗುಜರಾತ್ ಪ್ರವೇಶಿಸಿದ್ದ ಪಾಕ್ ಮೂಲದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಲು ಸಫಲವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾರ್ಚ್‌ 7 ರಂದು ಶಿವರಾತ್ರಿಯ ವೇಳೆ ದೇಶದ ಹಲವೆಡೆ ದಾಳಿ ನಡೆಸುವ ಸಲುವಾಗಿ ಪಾಕ್ ಮೂಲದ 10 ಉಗ್ರರು ಗುಜರಾತ್ ಪ್ರವೇಶಿಸಿದ್ದರು ಎನ್ನಲಾಗಿತ್ತು. ಅಲ್ಲದೇ ಈ ಕುರಿತಾಗಿ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನವೇ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತಲ್ಲದೇ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ನಾಲ್ಕು ಎನ್‌ ಎಸ್‌ ಜಿ ತಂಡಗಳನ್ನು ಗುಜರಾತ್‌ಗೆ ಕಳುಹಿಸಿತ್ತು.

ಅಲ್ಲದೇ ಎಲ್ ಇ ಟಿ ಹಾಗೂ ಜೆ ಇ ಎಂ ಭಯೋತ್ಪಾದಕ ಸಂಘಟನೆಗೆ ಸೇರಿದ ಈ ಉಗ್ರರ ವಿರುದ್ದ ಎನ್‌ ಎಸ್‌ ಜಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಈ ಗುಂಪಿನಲ್ಲಿದ್ದ ಮೂವರು ಉಗ್ರರನ್ನು ಶುಕ್ರವಾರವೇ ಹತ್ಯೆ ಮಾಡಲಾಗಿದ್ದು, ಇನ್ನುಳಿದ ಉಗ್ರರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂಬ ಮಾಹಿತಿ ಲಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...