alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಖರೀದಿಯಾದ ಕಾಂಡೋಮ್ ಸಂಖ್ಯೆ

ಸುರಕ್ಷಿತ ಲೈಂಗಿಕತೆ ಮತ್ತು ಜನನ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಕಾಂಡೋಮ್ ಬಳಸಲಾಗುತ್ತದೆ. ಇದೇ ಉದ್ದೇಶದಿಂದ ಆನ್ ಲೈನ್ ನಲ್ಲಿ ಕಾಂಡೋಮ್ ಉಚಿತ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದ್ದು, ಕೇವಲ 69 ದಿನದಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಮ್ ಖರೀದಿಸಿದ್ದಾರೆ.

ಈ ಮಳಿಗೆಗೆ ಏಡ್ಸ್ ಹೆಲ್ತ್ ಕೇರ್ ನಿಂದ 9.56 ಲಕ್ಷ ಕಾಂಡೊಮ್ ಗಳನ್ನು ಉಚಿತವಾಗಿ ನೀಡಲಾಗಿತ್ತು. ಇವುಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಸಮುದಾಯಗಳು 5.14 ಲಕ್ಷ ಕಾಂಡೋಮ್ ಗಳನ್ನು ಖರೀದಿ ಮಾಡಿವೆ. ಅಲ್ಲದೇ, 4.41 ಲಕ್ಷ ಕಾಂಡೋಮ್ ಗಳನ್ನು ಜನ ವೈಯಕ್ತಿಕವಾಗಿ ಆನ್ ಲೈನ್ ಬುಕ್ ಮಾಡಿ ಖರೀದಿ ಮಾಡಿದ್ದಾರೆ.

ವೈಯಕ್ತಿಕವಾಗಿ ಕಾಂಡೋಮ್ ಖರೀದಿಸಿದವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ದೆಹಲಿಯವರಾಗಿದ್ದಾರೆ. ಹಿಂದೂಸ್ತಾನ್ ಲ್ಯಾಟಿಕ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಉಚಿತ ಕಾಂಡೋಮ್ ಮಾರಾಟ ಮಳಿಗೆ ನಡೆಯುತ್ತಿದ್ದು, ಡಿಸೆಂಬರ್ ವರೆಗೆ ಸುಮಾರು 10 ಲಕ್ಷ ಕಾಂಡೋಮ್ ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತಾದರೂ, ಜುಲೈ ಮೊದಲ ವಾರದಲ್ಲೇ ಎಲ್ಲಾ ಕಾಂಡೋಮ್ ಮಾರಾಟವಾಗಿದ್ದು, 20 ಲಕ್ಷ ಕಾಂಡೋಮ್ ಪೂರೈಕೆಗೆ ಸೂಚಿಸಲಾಗಿದೆ.

ಜನ ಅಂಗಡಿಗೆ ಹೋಗಿ ಕಾಂಡೋಮ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಆನ್ ಲೈನ್ ನಲ್ಲಿ ಹೆಚ್ಚಿನ ಜನರು ಖರೀದಿಸುತ್ತಾರೆ. ಜನವರಿ ತಿಂಗಳಿಗೆ 50 ಲಕ್ಷ ಕಾಂಡೋಮ್ ಗೆ ಆರ್ಡರ್ ಮಾಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...