alex Certify
ಕನ್ನಡ ದುನಿಯಾ       Mobile App
       

Kannada Duniya

ನೀತಾ ಅಂಬಾನಿಗೆ ‘ವೈ’ ಕೆಟಗರಿ ಭದ್ರತೆ

nita ambani 3345ದೇಶದ ಅತಿ ದೊಡ್ಡ ಸಿರಿವಂತ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿಯವರಿಗೆ ನೀಡಿರುವ ‘ಝಡ್’ ಕೆಟಗರಿ ಭದ್ರತೆ ಬಳಿಕ, ಈಗ ಅವರ ಪತ್ನಿ ನೀತಾ ಅಂಬಾನಿಯವರಿಗೆ ‘ವೈ’ ಕೆಟಗರಿ ಭದ್ರತೆ ಒದಗಿಸಲಾಗಿದೆ.

10 ಮಂದಿ ಶಸ್ತ್ರಸಜ್ಜಿತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳನ್ನು ನೀತಾ ಅಂಬಾನಿಯವರ ರಕ್ಷಣೆಗೆ ನಿಯೋಜಿಸಲಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭರಿಸಲಿದೆ.

2013 ರಲ್ಲಿ ಮುಕೇಶ್ ಅಂಬಾನಿಯವರಿಗೆ ‘ಝಡ್’ ಕೆಟಗರಿ ಭದ್ರತೆ ಒದಗಿಸಲಾಗಿದ್ದು, ಪೈಲಟ್ ಮತ್ತು ಎಸ್ಕಾರ್ಟ್ ವಾಹನಗಳಲ್ಲಿ ಕಮಾಂಡೋಗಳು ದೇಶದಲ್ಲಿ ಅವರು ಸಂಚರಿಸುವ ವೇಳೆ ರಕ್ಷಣೆ ಒದಗಿಸುತ್ತಿದ್ದಾರೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ರಕ್ಷಣೆಗೆ ಖಾಸಗಿ ಅಂಗರಕ್ಷಕ ಪಡೆ ಇದ್ದರೂ ನಿಯಮಾವಳಿಗಳಂತೆ ಅವರುಗಳು ಶಸ್ತ್ರಗಳನ್ನು ಹೊಂದಲು ಪರವಾನಗಿ ಇಲ್ಲದ ಕಾರಣ ಸರ್ಕಾರದಿಂದಲೇ ಕಮಾಂಡೋ ರಕ್ಷಣೆ ಒದಗಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...