alex Certify
ಕನ್ನಡ ದುನಿಯಾ       Mobile App
       

Kannada Duniya

10ನೇ ತರಗತಿಯಲ್ಲಿ ಫೇಲಾದ ಮಗನಿಗೆ ತಂದೆ ಮಾಡಿದ್ದೇನು?

ಮಕ್ಕಳಿಗೆ ಪರೀಕ್ಷೆ ಬಂದ್ರೆ ಪಾಲಕರಿಗೆ ಜ್ವರ ಬರುತ್ತೆ. ಮಕ್ಕಳು ಹೆಚ್ಚಿನ ಅಂಕ ತೆಗೆದುಕೊಂಡು ಪಾಸ್ ಆಗ್ಲಿ ಅಂತಾ ಎಲ್ಲ ಪಾಲಕರು ಬಯಸ್ತಾರೆ. ಅಪ್ಪಿತಪ್ಪಿ ಮಕ್ಕಳು ಫೇಲ್ ಆದ್ರೆ ಪಾಲಕರ ಬೈಗುಳ ನಿಶ್ಚಿತ. ಆದ್ರೆ ಮಧ್ಯಪ್ರದೇಶ ತಂದೆಯೊಬ್ಬನ ನಡೆ ಆಶ್ಚರ್ಯ ಹುಟ್ಟಿಸಿದೆ.

ಮಧ್ಯಪ್ರದೇಶದ 10ನೇ ತರಗತಿ ಬೋರ್ಡ್ ಫಲಿತಾಂಶ ಇತ್ತೀಚಿಗಷ್ಟೇ ಬಂದಿದೆ. ಮಗ 4 ವಿಷಯದಲ್ಲಿ ಫೇಲ್ ಆಗಿದ್ದಾನೆ ಎಂಬ ಸಂಗತಿ ತಂದೆಗೆ ಗೊತ್ತಾಗಿದೆ. ಮಗನಿಗೆ ಬೈದು ಬುದ್ದಿ ಹೇಳುವ ಬದಲು ಪಾರ್ಟಿ ನೀಡೋದು ಸೂಕ್ತ ಎಂದು ತಂದೆ ಭಾವಿಸಿದ್ದಾನೆ. ಮಗ ಫೇಲ್ ಆಗಿದ್ದಕ್ಕೆ ಸಿಹಿ ನೀಡುವ ಜೊತೆಗೆ ಸಂಬಂಧಿಕರಿಗೆ ಸ್ನೇಹಿತರಿಗೆ ಪಾರ್ಟಿ ನೀಡಿದ್ದಾನೆ.

ತಂದೆ ಹೆಸ್ರು ಸುರೇಂದ್ರ, ಸಿವಿಲ್ ಕಂಟ್ರಾಕ್ಟರ್, ಮಗ ಆಶು. 10ನೇ ತರಗತಿಯಲ್ಲಿ 4 ವಿಷಯಗಳಲ್ಲಿ ಫೇಲ್ ಆಗಿದ್ದಾನೆ ಎಂಬ ಸಂಗತಿ ಗೊತ್ತಾಗ್ತಿದ್ದಂತೆ ಮಗನಿಗೆ ಪ್ರೋತ್ಸಾಹ ನೀಡಲು ತಂದೆ ಪಾರ್ಟಿ ನೀಡಲು ನಿರ್ಧರಿಸಿದ್ದಾನೆ. ಫೇಲ್ ಆಗಿರುವ ಭಯದಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡ್ರೆ ಎನ್ನುವ ಕಾರಣಕ್ಕೆ ತಂದೆ ಪಾರ್ಟಿ ನೀಡಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...