alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಬಚ್ಚಿಟ್ಟುಕೊಂಡಿದ್ದೆಲ್ಲಿ ಗೊತ್ತಾ…?

ಗಾಜಿಯಾಬಾದ್: ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದು ವರ್ಷ ಅಲ್ಮೆರಾದಲ್ಲಿ ಬಚ್ಚಿಟ್ಟುಕೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ದೆಹಲಿ-ಗಾಜಿಯಾಬಾದ್ ಪ್ರಾಂತ್ಯದಲ್ಲಿ ಮಾದಕ ವಸ್ತು ಮಾರಾಟ ಮಾಡುವ ಪ್ರಕರಣದಲ್ಲಿ ಆರೋಪಿಯಾಗಿದ್ದ 48 ವರ್ಷದ ಗುಲಾಬ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಮನೆಯ  ಅಲ್ಮೆರಾದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದ. ಈತನಿಗೆ ಪತ್ನಿ ಹಾಗೂ ಮಗ ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಲಾಬ್ ಸಿಂಗ್ ನಾಲ್ಕು ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ವರ್ಷ ಪೊಲೀಸರು ಗುಲಾಬ್ ಸಿಂಗ್ ನನ್ನು ಬಂಧಿಸಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತ, ತನ್ನ ಮನೆಯ ಅಲ್ಮೆರಾದಲ್ಲಿಯೇ ಅಡಗಿ ಕುಳಿತ್ತಿದ್ದ. ಒಂದು ವರ್ಷ ಮನೆಯಿಂದ ಆಚೆ ಬಾರದ ಈತ, ಪೊಲೀಸರು ಅಥವಾ ಅತಿಥಿಗಳು ಮನೆಗೆ ಬಂದರೆ, ಅಲ್ಮೆರಾದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ. ಒಮ್ಮೆ ಅತಿಥಿಗಳು ಮನೆಗೆ ಬಂದಾಗ ಸತತ ಎರಡು ದಿನ ಇದೇ ಅಲ್ಮೆರಾದಲ್ಲಿ ಅಡಗಿಕೊಂಡಿದ್ದು, ಪತ್ನಿ ಆತನಿಗೆ ಊಟೋಪಚಾರವನ್ನು ಮಾಡುತ್ತಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಕಳೆದ ವರ್ಷ ಜುಲೈ 13ರಂದು ಪೊಲೀಸರು ವಿಚಾರಣೆಗೆಂದು ಬಂಧಿಸಿದ್ದಾಗ, ಆರೋಪಿ ತಪ್ಪಿಸಿಕೊಂಡು ಮನೆ ಸೇರಿದ್ದ. ಆದರೆ ಗುಲಾಬ್ ಸಿಂಗ್ ಪತ್ನಿ, ತನ್ನ ಗಂಡನ ಅಪಹರಣವಾಗಿದ್ದು, ಇದಕ್ಕೆ ಪೇದೆ ಹಾಗೂ ಇತರೆ ಸಿಬ್ಬಂದಿಗಳು ಕಾರಣವೆಂದು ದೂರು ನೀಡಿದ್ದರಿಂದ, ಪೇದೆಯನ್ನು ಅಮಾನತುಗೊಳಿಸಲಾಗಿತ್ತು. ಯಾವುದೇ ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಬಂದರೂ, ಅಪಹರಣ ಪ್ರಕರಣದ ಎಫ್ಐಆರ್ ನ್ನು ತೋರಿಸಿ ಕುಟುಂಬದವರು ಆತನನ್ನು ಬಚಾವ್ ಮಾಡುತ್ತಿದ್ದರು. ಆದರೆ ಶನಿವಾರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...