alex Certify
ಕನ್ನಡ ದುನಿಯಾ       Mobile App
       

Kannada Duniya

1 ರೂಪಾಯಿಗೆ ಸಿಗುತ್ತೆ ಹೊಟ್ಟೆ ತುಂಬಾ ಊಟ

re-one-meal-man 679

ಅವರೇನು ಆಗರ್ಭ ಶ್ರೀಮಂತರಲ್ಲ. ಆದರೂ ಕಷ್ಟದಲ್ಲಿರುವವನ್ನು ಕಂಡರೆ ಮರುಗುವ ಸಹೃದಯಿ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಒಪ್ಪೊತ್ತಿನ ಊಟದಲ್ಲೇ ದಿನ ದೂಡುತ್ತಿರುವುದನ್ನು ಕಂಡು ಮರುಗಿದ ಅವರು ಕೇವಲ ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದಾರೆ.

ಹೌದು ಇಂತದೊಂದು ಸೇವಾ ಕಾರ್ಯವನ್ನು ತಮಿಳುನಾಡಿನ ಈರೋಡ್ ನಿವಾಸಿ ವೆಂಕಟರಮಣನ್ ಕಳೆದ ಎಂಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಅವರು ಯಾರ ಬಳಿಯೂ ಹಣಕಾಸಿನ ನೆರವಿಗೆ ಕೈ ಚಾಚಿಲ್ಲ. ಅಲ್ಲದೇ ತಮ್ಮ ಈ ಕಾರ್ಯಕ್ಕೆ ಪ್ರಚಾರವನ್ನೂ ಬಯಸಿಲ್ಲ. ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿರುವ ವೆಂಕಟರಮಣನ್ ಮತ್ತವರ ಕುಟುಂಬದ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈರೋಡ್ ಸರ್ಕಾರಿ ಆಸ್ಪತ್ರೆ ಬಳಿ ಜೀವನೋಪಾಯಕ್ಕಾಗಿ ಎಎಂವಿ ಹೋಮ್ಲಿ ಮೆಸ್ ನಡೆಸುತ್ತಿದ್ದ ವೆಂಕಟರಮಣನ್ ಬಳಿ 2007 ರಲ್ಲಿ ವೃದ್ದ ಮಹಿಳೆಯೊಬ್ಬರು ಇಡ್ಲಿ ಕೇಳಿಕೊಂಡು ಬರುತ್ತಾರೆ. ಆದರೆ ಇಡ್ಲಿ ಇಲ್ಲದ ಕಾರಣ ವೆಂಕಟರಮಣನ್ ಆಕೆಯಿಂದ 10 ರೂ. ಪಡೆದು ಮೂರು ದೋಸೆ ನೀಡುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ವೃದ್ದ ಪತಿಗೂ ತೆಗೆದುಕೊಂಡು ಹೋಗಬೇಕು. ಇಡ್ಲಿಯಾಗಿದ್ದರೆ ಕಡಿಮೆ ದುಡ್ಡು ಮತ್ತು ಹೆಚ್ಚು ಆಹಾರ ಬರುತ್ತಿತ್ತು ಎಂಬ ವೃದ್ದೆಯ ಮಾತು ಕೇಳಿ ವೆಂಕಟರಮಣನ್ ಬಡ ರೋಗಿಗಳು ಮತ್ತವರ ಸಂಬಂಧಿಗಳಿಗೆ ಏನಾದರೂ ಸಹಾಯ ಮಾಡಬೇಕೆಂದು ಅಂದೇ ನಿಶ್ಚಯ ಮಾಡುತ್ತಾರೆ.

ಕೂಡಲೇ ಸರ್ಕಾರಿ ಆಸ್ಪತ್ರೆ ವೈದ್ಯರ ಬಳಿ ತೆರಳಿ ಈ ಪ್ರಸ್ತಾಪ ಮುಂದಿಡುತ್ತಾರೆ. ಅವರಿಂದಲೂ ಇದಕ್ಕೆ ಪೂರಕ ಪ್ರತಿಕ್ರಿಯೆ ಬಂದ ಬಳಿಕ ವೆಂಕಟರಮಣನ್ ಈ ಸೇವಾ ಕಾರ್ಯ ಕೈಗೊಂಡಿದ್ದು, ಬಡ ರೋಗಿಗಳು ಮತ್ತವರ ಸಂಬಂಧಿಗಳಿಂದ ಕೇವಲ ಒಂದು ರೂ. ಪಡೆದು ಹೊಟ್ಟೆ ತುಂಬಾ ಊಟ ನೀಡುತ್ತಾರೆ. ಜೊತೆಗೆ ಬೆಳಗಿನ ತಿಂಡಿಯನ್ನೂ 1 ರೂ. ಗೆ ನೀಡುತ್ತಿದ್ದಾರೆ. ಪ್ರಸ್ತುತ ದಿನನಿತ್ಯ 70 ಮಂದಿಗೆ 1 ರೂ. ಗೆ ಆಹಾರ ಪೂರೈಸುತ್ತಿರುವ ವೆಂಕಟರಮಣನ್ ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದಾಗಿ ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...