alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ದುಬಾರಿ ಟೀ ಪುಡಿ ಬೆಲೆ ಎಷ್ಟು ಗೊತ್ತಾ…?

ಚಹಾ ಹರಾಜು ವ್ಯವಹಾರದಲ್ಲಿ ಮಂಗಳವಾರ ಹೊಸ ದಾಖಲೆ ಸೃಷ್ಟಿಯಾಗಿದೆ. ಅಸ್ಸಾಂನ ಒಂದು ಚಹಾ ಪುಡಿ ಪ್ರತಿ ಕಿಲೋಗ್ರಾಮ್ ಗೆ 39,001 ರೂಪಾಯಿಯಂತೆ ಮಾರಾಟವಾಗಿದೆ. ಡಿಬ್ರಗಢ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್ ನಲ್ಲಿ ಇದು ಸಿದ್ಧವಾಗಿದೆ. ಪ್ಯಾನ್ ಇಂಡಿಯಾ ಹರಾಜು ವ್ಯವಸ್ಥೆಯಡಿಯಲ್ಲಿ ಈ ಚಹಾ ವಿಶ್ವದಾಖಲೆ ಬರೆದಿದೆ.

ಈವರೆಗೆ ಯಾವ ಟೀ ಪುಡಿ ಕೂಡ ಪ್ರತಿ ಕಿಲೋಗ್ರಾಮ್ ರೂಪದಲ್ಲಿ ಮಾರಾಟವಾಗಿಲ್ಲ. ಈ ದರದಲ್ಲಿ ಸಾಂಪ್ರದಾಯಿಕ ಚಹಾ  ಮಾರಾಟ ಮಾಡುವುದು ವಿಶ್ವ ಮಟ್ಟದಲ್ಲಿ ದಾಖಲೆಯಾಗಿದೆ ಎಂದು ಗುವಾಹಟಿ ಟೀ ಹರಾಜು ಕೇಂದ್ರ ಹೇಳಿದೆ. ಈ ಟೀ ಪುಡಿಗೆ ಗೋಲ್ಡ್ ಸ್ಪೆಷಲ್ ಗ್ರೇಡ್ ಟೀ ಎಂದು ಹೆಸರಿಡಲಾಗಿದೆ.

ಈ ದರದಲ್ಲಿ ಟೀ ಪುಡಿ ಮಾರಾಟವಾಗಿರುವುದು ಬೆಳೆಗಾರರನ್ನು ಪ್ರೋತ್ಸಾಹಿಸುತ್ತದೆ. ಮನೋಹರಿ ಗೋಲ್ಡ್ ಟೀಯನ್ನು ದಲ್ಲಾಳಿಗಳ ಸಹಾಯದಿಂದ ಗುವಾಹಟಿಯ ಸೌರಭ್ ಟಿ ಟ್ರೇಡರ್ಸ್ ಬಿಡ್ಡಿಂಗ್ ಮಾಡ್ತು. ಸೌರಭ್ ಟಿ ಟ್ರೇಡರ್ಸ್ ದೆಹಲಿ ಹಾಗೂ ಅಹಮದಾಬಾದ್ ಖರೀದಿದಾರರಿಗಾಗಿ ಈ ಟೀ ಖರೀದಿ ಮಾಡಿದೆ.

ಮನೋಹರಿ ಟಿ ಎಸ್ಟೇಟ್ ಮಾಲೀಕರಾದ ರಾಜನ್  ಲೋಹಿಯಾ ಮೇಲ್ವಿಚಾರಣೆಯಲ್ಲಿ ಚಹಾ ಬೆಳೆಯಲಾಗಿದೆ. ಟೀ 24 ಕ್ಯಾರೆಟ್ ಚಿನ್ನದಂತೆ ಕಾಣುತ್ತದೆ ಎಂದು ರಾಜನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...