alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಕ್ಕಾಗಿ ‘ಮಹಾ’ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಖರ್ಚು…?

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಚಹಾ ಹಗರಣ ನಡೆಸಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡಿದೆ. ಆರ್ ಟಿ ಐ ಒಂದರ ಮಾಹಿತಿ ಪ್ರಕಾರ ಫಡ್ನವಿಸ್ ಸರ್ಕಾರ ಪ್ರತಿದಿನ ಚಹಾಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ.

ಕಾಂಗ್ರೆಸ್ ಮುಖಂಡ ನಿಖಿಲ್ ಕಾಂಬ್ಳೆ ಎಂಬಾತ ಆರ್ ಟಿ ಐ ಅಡಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. 2016-17ರಲ್ಲಿ ಫಡ್ನವಿಸ್ ಸರ್ಕಾರ ಚಹಾ-ಕಾಫಿಗಾಗಿ 1,20,92,972 ರೂಪಾಯಿ ಖರ್ಚು ಮಾಡಿದೆ. 2017-18ರಲ್ಲಿ ಈ ಮೊತ್ತ 3,34,64,905 ರೂಪಾಯಿ ಆಗಿದೆ.

ಅಂದ್ರೆ ಪ್ರತಿ ತಿಂಗಳು ಚಹಾ-ಕಾಫಿಗಾಗಿ 27,88,742 ರೂಪಾಯಿ ವೆಚ್ಚ ಮಾಡಲಾಗಿದೆ. ಅಂದ್ರೆ ಪ್ರತಿ ದಿನ 92,958 ರೂಪಾಯಿ ಖರ್ಚು ಮಾಡಿದಂತಾಯ್ತು. ಒಂದು ಕಪ್ ಚಹಾಕ್ಕೆ ತಲಾ 5 ರೂಪಾಯಿಯಂತೆ ಲೆಕ್ಕ ಹಾಕಿದ್ರೆ, ದಿನಕ್ಕೆ 26,650 ಕಪ್ ಚಹಾ ಸೇವಿಸಲಾಗಿದೆ.

ಇಷ್ಟೊಂದು ಪ್ರಮಾಣದಲ್ಲಿ ಚಹಾ ಸೇವಿಸಲು ಸಾಧ್ಯವೇ ಇಲ್ಲ, ಫಡ್ನವಿಸ್ ಚಾಯ್ ಪೆ ಚರ್ಚಾ ಹೆಸರಲ್ಲಿ ಚಾಯ್ ಪೆ ಖರ್ಚಾ ಮಾಡಿದ್ದಾರೆ ಅನ್ನೋದು ಕಾಂಗ್ರೆಸ್ ಆರೋಪ. ಚಹಾ ಸೇವನೆ ಹೆಸರಲ್ಲಿ ಸುಖಾ ಸುಮ್ಮನೇ ಬಿಲ್ ಜನರೇಟ್ ಮಾಡಿ ಹಣ ಲಪಟಾಯಿಸಲಾಗಿದೆ ಅಂತಾ ಆರೋಪ ಮಾಡಿದೆ.

ಆದ್ರೆ ಈ ಆರೋಪವನ್ನು ಬಿಜೆಪಿ ಮುಖಂಡ ರಾಮ್ ಕದಮ್ ತಳ್ಳಿ ಹಾಕಿದ್ದಾರೆ. ಇದು ಚಹಾ, ಕಾಫಿ, ಅತಿಥಿಗಳಿಗೆ ನೀಡಿದ ತಿನಿಸು, ಬೊಕೆ ಎಲ್ಲದಕ್ಕೂ ಮಾಡಿದ ಖರ್ಚು. ಈ ಹಿಂದೆ ಆಯಾ ಇಲಾಖೆಗಳೇ ಮೀಟಿಂಗ್ ನಲ್ಲಿ ಸೇವಿಸಿದ ಚಹಾ-ಕಾಫಿ ವೆಚ್ಚ ಭರಿಸುತ್ತಿದ್ದವು. ಆದ್ರೆ ಈಗ ಸಿಎಂ ಕಚೇರಿಯಲ್ಲೇ ಸಭೆಗಳೆಲ್ಲಾ ನಡೆಯುವುದರಿಂದ ಬಿಲ್ ಜಾಸ್ತಿಯಾಗಿದೆ ಅಂತಾ ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...