alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿಯ ಕತ್ತಲಲ್ಲಿ ರಕ್ಷಕರು ಮಾಡಿದ್ದಾರೆ ತಲೆತಗ್ಗಿಸುವ ಕೆಲಸ

uttarakhand-police-1

ನಮ್ಮನ್ನು ರಕ್ಷಿಸುವ ಪೊಲೀಸರೇ ಭಕ್ಷಕರಾದ್ರೆ ದೇಶದ ಸ್ಥಿತಿ ಏನಾಗಬೇಡ. ಉತ್ತರಾಖಂಡ್ ದ ನಾನಕಮತ್ತಾದಲ್ಲಿ ಕಳ್ಳರನ್ನು ಹಿಡಿಯಬೇಕಾಗಿದ್ದ ಪೊಲೀಸರೇ ಕಳ್ಳತನ ಮಾಡಿದ್ದಾರೆ. ಒಬ್ಬ ಪೊಲೀಸ್ ಹಾಗೂ ಇನ್ನೊಬ್ಬ ಹೋಂ ಗಾರ್ಡ್ ಸೇರಿ ತರಕಾರಿ ಅಂಗಡಿಯ ಬೀಗ ಮುರಿದು ಹಣ ಹಾಗೂ ತರಕಾರಿಗಳನ್ನು ಕದ್ದಿದ್ದಾರೆ. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಫೆಬ್ರವರಿ 27 ರಂದು ತರಕಾರಿ ಅಂಗಡಿಯ ಬೀಗ ಮುರಿದ ಇವರು, 1400 ರೂಪಾಯಿ ಹಾಗೂ 50 ಕೆಜಿ ಈರುಳ್ಳಿ ಚೀಲವನ್ನು ಕದ್ದೊಯ್ದಿದ್ದಾರೆ. ತರಕಾರಿ ಅಂಗಡಿ ನಡೆಸುತ್ತಿರುವ ಪೂನಂ ಲಾಲ್ ಎಸ್ಪಿಗೆ  ಈ ವಿಷಯ ತಿಳಿಸಿದ್ದಾಳೆ. ಪೂನಂ ವಿಷಯ ತಿಳಿಸುತ್ತಿದ್ದಂತೆ ಪಕ್ಕದಲ್ಲಿರುವ ಬಂಗಾರದ ಅಂಗಡಿಗೆ ಅಳವಡಿಸಲಾಗಿರುವ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ವೀಕ್ಷಿಸಿದ್ದಾರೆ.

ಸಿಸಿ ಟಿವಿಯಲ್ಲಿ ಇಬ್ಬರು ಅಂಗಡಿ ಬೀಗ ಮುರಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅವರ ಗುರುತು ಪತ್ತೆ ಹಚ್ಚಲಾಗಿದ್ದು, ನಂತ್ರ ಇಬ್ಬರನ್ನೂ ಅಮಾನತ್ತು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...