alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಗೊತ್ತಾಯ್ತು ಆಕೆ ಹುಡುಗಿಯಲ್ಲ,ಬದಲಾಗಿ…

bride1

ಮದುವೆಯಾಗಿ ಸುಂದರ ಬದುಕು ನಡೆಸುವ ಕನಸು ಕಂಡಿದ್ದ. ಆಸೆಯಂತೆ ಮದುವೆ ನೆರವೇರ್ತು. ಆದ್ರೆ ಮೊದಲ ರಾತ್ರಿ ಆತನ ಕನಸಿನ ಗೋಪುರ ಕಳಚಿ ಬಿತ್ತು. ಹೆಣ್ಣೆಂದು ಮದುವೆಯಾಗಿದ್ದ ಹುಡುಗಿ ಹುಡುಗಿಯಾಗಿರಲಿಲ್ಲ. ಬದಲಾಗಿ ನಪುಂಸಕನನ್ನು ಯುವಕ ಮದುವೆಯಾಗಿದ್ದ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ. ಸಬೀಗಂಜ್ ನ ನಿವಾಸಿ ಹರಿ ಓಂ ಮೋಸದ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆತ ಮದಿನಾಥ ಹುಡುಗಿಯನ್ನು ಏಪ್ರಿಲ್ 2016ರಲ್ಲಿ ಮದುವೆಯಾಗಿದ್ದ. ಮೊದಲ ರಾತ್ರಿ ಹೆಂಡತಿಯನ್ನು ನೋಡಿ ಕಂಗಾಲಾಗಿದ್ದಾನೆ. ಆತ ಮದುವೆಯಾಗಿದ್ದು ಹುಡುಗಿಯನ್ನಲ್ಲ ಎಂಬುದು ಗೊತ್ತಾಗ್ತಿದ್ದಂತೆ ಮನೆಯವರಿಗೆ ಹೇಳಿದ್ದಾನೆ.

ಕುಟುಂಬಸ್ಥರು ರಾತ್ರಿಯೇ ವಧುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಕೂಡ ವೈದ್ಯರು ನಪುಂಸಕ ಎಂದು ವರದಿ ನೀಡಿದ್ದಾರೆ.ಈ ಬಗ್ಗೆ ವಧುವಿನ ತಂದೆಯನ್ನು ಕೇಳಿದ್ರೆ ಆತ ಆರೋಪವನ್ನು ನಿರಾಕರಿಸಿದ್ದಾನೆ. ವಧುವಿನ ಕಡೆಯವರು ಸಂಬಂಧಿಕರೇ ಆಗಿದ್ದರಿಂದ ಹರಿ ಓಂ ಮೊದಲು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದ್ರೆ ಹೆಂಡತಿ ಮನೆಯವರು ಹುಡುಗನ ಮೇಲೆ ವಿನಾಕಾರಣ ಆರೋಪ ಮಾಡ್ತಿರುವುದರಿಂದ ಬೇಸತ್ತ ಹರಿ ಓಂ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...